- Advertisement -
- Advertisement -
ಮಂಗಳೂರು: ಶ್ರೀ ಸಾಯಿ ಪರಿವಾರ್ ಟ್ರಸ್ಟ್ (ರಿ) ತೊಕ್ಕೊಟ್ಟು ಇದರ ಸದಸ್ಯರೇ ಸಂಗ್ರಹಿಸಿದ 15,000 ರೂಪಾಯಿ ನಿಧಿಯನ್ನು ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿರುವ ಸೋಮೇಶ್ವರ ನೆಹರೂನಗರದ ನಿವಾಸಿ ಪುಷ್ಪಕಿರಣ್ ಅವರಿಗೆ ನೀಡಲಾಯಿತು. ಮೂಡಬಿದಿರೆ ಆಳ್ವಾಸ್ ಹೋಮೀಯೋಪಥಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ರಾಜ್ ಆಳ್ವ ರವರು ನೀಡಿದ ವೈಯಕ್ತಿಕ 5,000 ರೂಪಾಯಿಗಳನ್ನು ಸೇರಿಸಿ ಒಟ್ಟು 15,000 ರೂಪಾಯಿಗಳ ಚೆಕ್ಕನ್ನು ಪುಷ್ಪಕಿರಣ್ ಅವರಿಗೆ ನೀಡಲಾಯಿತು.

ಶ್ರೀ ಸಾಯಿ ಪರಿವಾರ್ ಟ್ರಸ್ಟ್ (ರಿ)ನ ಪುರುಷೋತ್ತಮ ಕಲ್ಲಾಪು, ಪ್ರವೀಣ್ ಎಸ್ ಕುಂಪಲ, ಕಿಶೋರ್ ಮಂಚಿ, ಸತೀಶ್ ಭಟ್ನಗರ, ರವಿಶಂಕರ್ ಸೋಮೇಶ್ವರ, ಗಣೇಶ್ ಅಂಚನ್, ಜಗದೀಶ್ ಆಚಾರ್ಯ, ಶವಿತ್ ಉಚ್ಚಿಲ್, ರೂಪೇಶ್ ಉಚ್ಚಿಲ್, ಪ್ರಕಾಶ್ ಸಿಂಪೋಣಿ ,ಉಳ್ಳಾಲ ಪೊಲೀಸ್ ಠಾಣಾ ಸ್ಪೆಷಲ್ ಬ್ರಾಂಚ್ ಸಿಬ್ಬಂದಿ ರಂಜಿತ್ ಕುಮಾರ್ ಉಪಸ್ಥಿತರಿದ್ದರು.



- Advertisement -