Monday, September 7, 2026
spot_imgspot_img
spot_imgspot_img

ಮಂಗಳೂರು: ಹಾಸ್ಟೆಲ್ ಕಿಟಕಿ ಮುರಿದು ಪರಾರಿಯಾದ ಮೂವರು ಹುಡುಗಿಯರು

- Advertisement -
- Advertisement -

ಮಂಗಳೂರಿನ ಮೇರಿಹಿಲ್ ನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಮೂವರು ಪಿಯುಸಿ ವಿದ್ಯಾರ್ಥಿನಿಯರು ಕಾಲೇಜು ಹಾಸ್ಟೆಲ್‌ನಿಂದ ಪರಾರಿಯಾದ ಘಟನೆ ನಡೆದಿದೆ.

ಇಂದು ಮುಂಜಾನೆ ನಸುಕಿನ ಜಾವ ಮೂರು ಗಂಟೆ ವೇಳೆಗೆ ಹಾಸ್ಟೆಲ್ ಕಿಟಕಿ ಮುರಿದು ಹೊರಕ್ಕೆ ಹಾರಿ ಪರಾರಿಯಾಗಿದ್ದಾರೆ. ಇದರಿಂದ ಕಾಲೇಜಿನಲ್ಲಿ ಆತಂಕ ಸೃಷ್ಟಿಯಾಗಿದೆ . ಬೆಂಗಳೂರು ಮೂಲದ ಯಶಸ್ವಿನಿ, ದಕ್ಷತಾ ಮತ್ತು ಚಿತ್ರದುರ್ಗ ಮೂಲದ ಸಿಂಚನಾ ಪರಾರಿಯಾದ ವಿದ್ಯಾರ್ಥಿನಿಯರು.

ಮುಂಜಾನೆ 3 ಗಂಟೆ ವೇಳೆಗೆ ಹೊರಕ್ಕೆ ಹಾರಿ ಹೋಗಿದ್ದಾರೆ ಎನ್ನಲಾಗುತ್ತಿದೆ. ನಾವು ಹೋಗುತ್ತಿದ್ದೇವೆ, ಕ್ಷಮಿಸಿ ಅಂತ ಪತ್ರ ಬರೆದಿಟ್ಟು ತೆರಳಿದ್ದಾರೆ. ಅವರು ಎಲ್ಲಿ ಹೋಗಿದ್ದಾರೆ, ಯಾರ ಉತ್ತೇಜನದಿಂದ ಹೊರ ತೆರಳಿದ್ದಾರೆ ಎನ್ನುವುದು ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

astr
- Advertisement -

Related news

error: Content is protected !!