Friday, July 11, 2025
spot_imgspot_img
spot_imgspot_img

ಮಂಗಳೂರು: ವಿದ್ಯಾರ್ಥಿ ನಾಪತ್ತೆ; ಪತ್ತೆಗಾಗಿ ಪೋಷಕರ ಮನವಿ

- Advertisement -
- Advertisement -
vtv vitla

ಮಂಗಳೂರು: ಕಳೆದ 8 ದಿನಗಳಿಂದ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿದ್ದು, ಪುತ್ರನನ್ನು ಹುಡುಕಿ ಕೊಡುವಂತೆ ತಾಯಿ ಕಾವೂರು ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಗುರುಪುರ ಕೈಕಂಬದ ಸರ್ಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಾಗರಾಜ ಭರಮಪ್ಪ ಕೊಂಗವಾಡ(17) ಕಾಣೆಯಾದ ಯುವಕ.

ಮಗ ನಾಗರಾಜ ಹುಷಾರಿಲ್ಲವೆಂದು 2 ದಿನ ಮನೆಯಲ್ಲೇ ಇದ್ದ. ಜು. 1ರಂದು ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ತಿಳಿಸದೆ ಮನೆ ಬಿಟ್ಟು ಹೋಗಿದ್ದಾನೆ. ಮಗನನ್ನು ಯಾರೋ ಪುಸಲಾಯಿಸಿ ಅವರ ಜೊತೆ ಕರೆದುಕೊಂಡು ಹೋಗಿರಬಹುದು ಎಂಬ ಸಂಶಯವಿದೆ ಎಂದು ಆತನ ತಾಯಿ ಎದುರುಪದವು ನಿವಾಸಿ ರೇಣವ್ವ ಎಂಬಾಕೆ ದೂರು ನೀಡಿದ್ದು, ಮಗನನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ.

ನಾಗರಾಜನ ವಯಸ್ಸು 17 ವರ್ಷ, ಎತ್ತರ 5 ಅಡಿ, ದುಂಡು ಮುಖ, ಗೋಧಿ ಮೈ ಬಣ್ಣ, ನಾಪತ್ತೆಯಾಗುವ ಸಂದರ್ಭ ಕಪ್ಪು ಬಣ್ಣದ ಪ್ಯಾಂಟ್, ಬನಿಯನ್ ಧರಿಸಿದ್ದ. ಕನ್ನಡ ಬಲ್ಲವನಾಗಿದ್ದು, ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈತನ ಬಗ್ಗೆ ಯಾರಿಗಾದರೂ ತಿಳಿದು ಬಂದಲ್ಲಿ ಕಾವೂರು ಠಾಣಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

- Advertisement -

Related news

error: Content is protected !!