Friday, May 17, 2024
spot_imgspot_img
spot_imgspot_img

ಮಂಗಳೂರು: ಕೊರೋನಾ ನಿಯಂತ್ರಣಕ್ಕೆ ಬರಬೇಕಾದರೇ ಪ್ರಧಾನಿ ಸುಬ್ರಹ್ಮಣ್ಯಕ್ಕೆ ಬರಬೇಕು; ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ

- Advertisement -G L Acharya panikkar
- Advertisement -

ಮಂಗಳೂರು: ರಾಜ್ಯವೂ ಸೇರಿದಂತೆ ದೇಶದಲ್ಲಿ ಕೊರೋನಾ ಎರಡನೇ ಅಲೆ ಮರಣ ಮೃದಂಗ ಸೃಷ್ಟಿಸಿದೆ. ಇನ್ನೇನು ಕೆಲ ತಿಂಗಳಿನಲ್ಲಿ ಮೂರನೇ ಅಲೆಯೂ ಬರಲಿದೆ ಎನ್ನಲಾಗುತ್ತಿದೆ. ಹೀಗಾಗಿ ಕೊರೋನಾದಿಂದ ಜನರನ್ನು ರಕ್ಷಿಸುವುದು ಹೇಗೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿರುವ ಬೆನ್ನಲ್ಲೇ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಕೊರೋನಾಕ್ಕೆ ಕುಕ್ಕೆಸುಬ್ರಹ್ಮಣ್ಯನ ಆರಾಧನೆ ಉತ್ತರ ಎಂದಿದ್ದಾರೆ.

ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಬೇಕಾದರೇ ಪ್ರಧಾನಿ ಮೋದಿ ಅತ್ಯಂತ ಶಕ್ತಿಪೀಠವಾಗಿರುವ ಮಂಗಳೂರಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಬೇಕು. ಅಷ್ಟೇ ಅಲ್ಲ ದೇಶದ ಹಿತಕ್ಕಾಗಿ ರೋಗ ನಿವಾರಣೆಗಾಗಿ ಅಗತ್ಯ ಪೂಜಾ – ಕಾರ್ಯಗಳನ್ನು ನಡೆಸಬೇಕು ಎಂದು ಸೂಚಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಎಂಥಹ ಮಾರಕ ರೋಗಕ್ಕೂ ಪ್ರಾರ್ಥನೆಯ ಮೂಲಕ ಫಲ ಪಡೆಯುವುದು ಸಾಧ್ಯ ಹೀಗಾಗಿ ಪ್ರಧಾನಿ ಮೋದಿ ಸುಬ್ರಹ್ಮಣ್ಯದಲ್ಲಿ ದೇವರ ಎದುರು ನಿಂತು ಜನರ ಹಿತಕ್ಕಾಗಿ ಪ್ರಾರ್ಥಿಸಿಕೊಂಡರೆ ಈ ಮಾರಕ ರೋಗ ನಿರ್ಮೂಲನೆಯಾಗಿ ಶಾಂತಿ ನೆಲೆಗೊಳ್ಳಲಿದೆ ಎಂದಿದ್ದಾರೆ.

ಈ ವಿಚಾರಕ್ಕೆ ಪುರಾಣದ ಉದಾಹರಣೆ ನೀಡಿರುವ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ, ಈ ಹಿಂದೆ ಚಂಪಾ ರಾಜ್ಯದಲ್ಲಿ ಮಾರಕ ರೋಗವೊಂದು ತಲೆದೋರಿತ್ತು. ಶ್ರೇಷ್ಠ ಪಂಡಿತರು ಗಿಡಮೂಲಿಕೆ ಬಳಸಿದರೂ ರೋಗ ಕಡಿಮೆಯಾಗಲಿಲ್ಲ. ಕೊನೆಗೆ ಆ ದೇಶದ ರಾಜ ಋಷಿಗಳ ಅಭಿಪ್ರಾಯದಂತೆ ಚಂಪಾಮಹಾರಾಜ ಬಹಳ ನಿಷ್ಠೆಯಿಂದ ಸುಬ್ರಹ್ಮಣ್ಯನ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಿದರು. ಕುಮಾರಾಧಾರ ನದಿಯಲ್ಲಿ ಸ್ನಾನ ಮಾಡಿ, ದೇವಾಲಯದಲ್ಲಿ ಉರುಳುಸೇವೆ ಮಾಡಿ ದೇವರಿಗೆ ರಾಜ್ಯಕ್ಕೆ ಬಂದ ಕಷ್ಟ ದೂರ ಮಾಡುವಂತೆ ಪ್ರಾರ್ಥನೆ ಮಾಡಿದ ಫಲವಾಗಿ ರೋಗಭೀತಿ ದೂರವಾಯಿತು. ದೈವಶಕ್ತಿಯಿಂದ ರೋಗ ದೂರವಾಯಿತು. ಈಗ ದೇಶದ ಜನಪ್ರತಿನಿಧಿಯಾಗಿರುವ ಮೋದಿ ಸುಬ್ರಹ್ಮಣ್ಯದಲ್ಲಿ ಪೂಜೆ ಪ್ರಾರ್ಥನೆ ಸಲ್ಲಿಸುವ ಮೂಲಕ ಈ ಸಂಕಷ್ಟದಿಂದ ದೇಶವಾಸಿಗಳನ್ನು ಕಾಪಾಡಬೇಕೆಂದು ಕೋರಿದ್ದಾರೆ.

- Advertisement -

Related news

error: Content is protected !!