Monday, June 22, 2026
spot_imgspot_img
spot_imgspot_img

ದಕ್ಷಿಣ ಕನ್ನಡ ಸುನ್ನಿ ಸೆಂಟರ್ (ರಿ) ಡೆವಲಪ್ಮೆಂಟ್ ಕಮಿಟಿ ಮಂಗಳೂರು ಇದರ ಅದೀನದಲ್ಲಿ ಕೃಷ್ಣಾಪುರದಲ್ಲಿ ನೂತನ ಶಾಖೆಯ ಉದ್ಘಾಟನಾ ಸಮಾರಂಭ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಸುನ್ನಿ ಸೆಂಟರ್ (ರಿ) ಡೆವಲಪ್ಮೆಂಟ್ ಕಮಿಟಿ ಮಂಗಳೂರು ಇದರ ಅದೀನದಲ್ಲಿ ಕೃಷ್ಣಾಪುರದಲ್ಲಿ ನೂತನ ಶಾಖೆಯ ಉದ್ಘಾಟನಾ ಸಮಾರಂಭ ಆದಿತ್ಯವಾರ ನಡೆಯಿತು. ಕಾರ್ಯಕ್ರಮದಲ್ಲಿ ಡಿ ಕೆ ಎಸ್ ಸಿ ಕೇಂದ್ರ ಸಮೀತಿ ಮತ್ತು ಮರ್ಕಝ್ ತಹ್ಲೀಮುಲ್ ಇಹ್ಸಾನ್ ಮೂಳೂರು ಇದರ ಅಧ್ಯಕ್ಷರಾದ ಅಸ್ಸಯ್ಯದ್ ಕುಂಬೋಳ್ ಆಟ ಕೋಯ ತಂಗಳ್ ದುವಾಶಿರ್ವಚನೆ ಮಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರ್ಕಝುತ್ತಹ್ಲೀಮುಲ್ ಮೂಳೂರ್ ಇದರ ಕಾರ್ಯಾಧ್ಯಕ್ಷರಾದ ಅಸ್ಸಯ್ಯದ್ ಮುಕ್ತಾರ್ ತಂಗಳ್ ವಹಿಸಿದರು.


.ಉದ್ಘಾಟನೆ ಈ ಕೆ ಇಬ್ರಾಹಿಂ ಮುಸ್ಲಿಯಾರ್ ಗೌರವಾನ್ವಿತ ಖಾಝಿ ಕೃಷ್ಣಾಪುರ ಜಮಾಅತ್ ನೆರವೇರಿಸಿದರು. ಕಾರ್ಯಕ್ರಮದ ಪ್ರಾಸ್ತಾವಿಕ ಬಾಷಣ ಸಂಸ್ಥೆಯ ವ್ಯವಸ್ಥಾಪಕರಾದ ಮುಸ್ತಫ ಸಅದಿ ಮಾಡಿದರು. ಮಾಜಿ ಶಾಸಕರಾದ ಮೊಯಿದೀನ್ ಬಾವಾರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕೃಷ್ಣಾಪುರದ ನೂತನ ಸಮೀತಿ ರಚನೆ ಮುಕ್ತಾರ್ ತಂಗಳ್ ರವರ ಸಮ್ಮುಖದಲ್ಲಿ ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದಿನ್ ಬಾವಾ ರವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ 5ನೇ ವಾರ್ಡ್ ಕಾರ್ಪೋರೇಟರ್ ಅಬೂಬಕ್ಕರ್ ಕುಳಾಯಿ, ಡೆವಲಪ್ಮೆಂಟ್ ಕಮಿಟಿ ಅಧ್ಯಕ್ಷರಾದ ಹುಸೈನಾಜಿ ಕೀನ್ಯಾ, ಕೇಂದ್ರ ಜುಮಾ ಮಸೀದಿ ಖತೀಬರಾದ ಫಾರೂಕ್ ಸಖಾಫಿ, ಬದ್ರುಲ್ ಹುದಾ ಖತೀಬ್ ಅಶ್ರಫ್ ಸಖಾಫಿ, ಕೇಂದ್ರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಹಾಜಿ ಕೀನ್ಯಾ, ಡಿ ಕೆ ಎಸ್ ಸಿ ಎಜುಪ್ಲಾನೆಟ್ ಪ್ರಿನ್ಸಿಪಾಲ್ ಸ್ವಾಬಿರ್ ಉಸ್ತಾದ್, ಕೇಂದ್ರ ಜುಮಾ ಮಸೀದಿ 7th ಬ್ಲಾಕ್ ಕೃಷ್ಣಾಪುರ ಇದರ ಅಧ್ಯಕ್ಷರಾದ ಜಲೀಲ್ ಬದ್ರಿಯಾ, ಹಾಗೂ ಕೇಂದ್ರ, ರಾಷ್ಟ್ರೀಯ, ವಲಯ, ಘಟಕಗಳ ಸದಸ್ಯರು ಡೆವಲಪ್ಮೆಂಟ್ ಕಮಿಟಿಯ ಸರ್ವ ಸದಸ್ಯರು ಬಾಗವಹಿಸಿದ್ದರು.


ನೂತನ ಸಮಿತಿಯಲ್ಲಿ ಇಬ್ರಾಹಿಂ ಬೈಕಂಪಾಡಿ ಅದ್ಯಕ್ಷರು, ಹನೀಫ್ ಕುಪ್ಪೆಪದವು ಪ್ರದಾನ ಕಾರ್ಯದರ್ಶಿ, ಅಬ್ದುಲ್ ಖಾದರ್ ವೆಲ್ಕಮ್ ಕೋಶಾಧಿಕಾರಿಯಾಗಿ ಆಯ್ಕೆಯಾದರು.


ಇದೇ ಸಂದರ್ಭದಲ್ಲಿ ಸಾಮಾಜಿ ಸೇವೆಯಲ್ಲಿ ಗೌರವ ಡಾಕ್ಟರೇಟ್ ಪಡೆದ ಮಾಜಿ ಶಾಸಕ ಮೊಯಿದಿನ್ ಬಾವಾ ಅವರನ್ನು ಸನ್ಮಾನಿಸಲಾಯಿತು.
ಶಂಸುದ್ದೀನ್ ಕೃಷ್ಣಾಪುರ ಕಾರ್ಯಕ್ರಮವನ್ನು ನಿರೂಪಿಸಿದರು. ಹಾಫಿಲ್ ಆದಿಲ್ ಕಿರಾಅತ್ ಪಠಿಸಿದರು.
ಮನ್ಸೂರ್ ರಯ್ಯನ್ ಅತಿಥಿಗಳನ್ನು ಸ್ವಾಗತಿಸಿದರು.

- Advertisement -

Related news

error: Content is protected !!