Friday, July 24, 2026
spot_imgspot_img
spot_imgspot_img

ಕಡಿಮೆ ಬೆಲೆಗೆ ಚಿನ್ನದ ಆಸೆ ತೋರಿಸಿ ಉದ್ಯಮಿಯಿಂದ 20 ಲಕ್ಷ ಲೂಟಿ; ಆರೋಪಿಗಳು ಪರಾರಿ

- Advertisement -
- Advertisement -

ದೇವನಹಳ್ಳಿ: ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ಆಸೆ ತೋರಿಸಿ ಹೈದರಾಬಾದ್ ಮೂಲದ ಉದ್ಯಮಿಯನ್ನು ಕರೆಸಿಕೊಂಡ ಖತರ್ನಾಕ್ ಗ್ಯಾಂಗ್ ಆತನ ಬಳಿ 20 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವೆಂಕಟಗಿರಿ ಕೋಟೆ ಗ್ರಾಮದ ಬಳಿ ನಡೆದಿದೆ.

ಹೈದರಾಬಾದ್ ಮೂಲದ ವಿಶ್ವಪ್ರಸಾದ್ ರೆಡ್ಡಿ, ಕುಮಾರ್ ಎಂಬಾತನೊಂದಿಗೆ ವ್ಯವಹಾರ ಮಾಡಿದ್ದರು. ಕುಮಾರ್ ತನ್ನ ಬಳಿ ನಾಲ್ಕು ಕೆಜಿ ಚಿನ್ನದ ನಾಣ್ಯಗಳಿದ್ದು, ಕೇವಲ 20 ಲಕ್ಷಕ್ಕೆ ಒಂದು ಕೆಜಿ ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ಹೇಳಿ ಕರೆಸಿಕೊಂಡಿದ್ದರು ಎನ್ನಲಾಗಿದೆ. ಇದನ್ನೇ ನಂಬಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಟ್ಯಾಕ್ಸಿ ಮೂಲಕ ವೆಂಕಟಗಿರಿ ಕೋಟೆ ಗ್ರಾಮದ ಬಳಿಯ ಖಾಸಗಿ ಬಡಾವಣೆಗೆ ವಿಶ್ವಪ್ರಸಾದ್ ರೆಡ್ಡಿ ಬಂದಿದ್ದು, ವಿಶ್ವಪ್ರಸಾದ್ ರೆಡ್ಡಿ ಬಂದ ಕೂಡಲೇ ಅವರ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇದ್ದ 20 ಲಕ್ಷ ರೂಪಾಯಿ ಹಣ ಹಾಗೂ ಮೊಬೈಲ್ ಕಸಿದುಕೊಂಡು ಆರು ಮಂದಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ವಿಜಯಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ವಶಕ್ಕಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!