Monday, June 22, 2026
spot_imgspot_img
spot_imgspot_img

ಮಂಗಳೂರು: ಆಕಸ್ಮಿಕ ಟಯರ್ ಸ್ಫೋಟ ಯುವಕ ಮೃತ್ಯು!

- Advertisement -
- Advertisement -

ಮಂಗಳೂರು: ಗಾಳಿ ತುಂಬಿಸುವಾಗ ಜೆಸಿಬಿಯ ಟಯರ್ ಟ್ಯೂಬ್ ಸಿಡಿದು ಯುವಕ ಮೃತಪಟ್ಟ ಘಟನೆ ಮಂಗಳೂರು ನಗರದ ಪದವು ಶಾಲೆ ಬಳಿ ಸಂಭವಿಸಿದೆ.

ಅಂಕೋಲಾ ಮೂಲದ ಟಿಪ್ಪರ್ ಚಾಲಕ ಮಿಥುನ್ (28) ಮೃತಪಟ್ಟವರು. ಅವರು ಮಧ್ಯಾಹ್ನ ವೇಳೆ ಟಯರ್ ಅಂಗಡಿ ಎದುರು ಟಿಪ್ಪರ್ ನಿಲ್ಲಿಸಿ, ಟಿಪ್ಪರ್‌ನೊಳಗಿದ್ದ ಜೆಸಿಬಿಯ ಟಯರ್‌ಗೆ ಗಾಳಿ ತುಂಬಿಸುತ್ತಿದ್ದರು. ಆಗ ಟ್ಯೂಬ್ ಸ್ಫೋಟಗೊಂಡಿದ್ದು ಅದರ ಡಿಸ್ಕ್ ಹಾರಿ ಅದರಲ್ಲಿದ್ದ ಬೋಲ್ಟ್‌ಗಳು ಮಿಥುನ್ ಅವರ ಎದೆಗೆ ಬಡಿದು ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!