Wednesday, July 22, 2026
spot_imgspot_img
spot_imgspot_img

ಮಂಗಳೂರು ರಥಬೀದಿಯಲ್ಲಿ ನೆಲಕ್ಕುರುಳಿದ ಬೃಹತ್ ಗಾತ್ರದ ಅಶ್ವಥ ಮರ! : ವಾಹನಗಳಿಗೆ ಹಾನಿ

- Advertisement -
- Advertisement -

ಮಂಗಳೂರು: ಮಂಗಳೂರು ನಗರದ ರಥಬೀದಿಯ ವೆಂಕಟರಮಣ ದೇವಾಲಯದ ಬಳಿಯ ಬೃಹತ್ ಅಶ್ವಥ ಮರ ಇದ್ದಕ್ಕಿದ್ದಂತೆ ಇಂದು ಬೆಳಗ್ಗೆ ನೆಲಕ್ಕುರುಳಿದೆ.

ಬೆಳಗ್ಗೆ ದೇವಸ್ಥಾನದ ಎದುರಿನ ಸುಮಾರು ನೂರು ವರ್ಷ ಹಳೆಯ ಅಶ್ವತ್ಥ ಮರ ಬುಡದಿಂದ ಮುರಿದು ಬಿದ್ದಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ ಒಂದು ಜೆಸಿಬಿ, ಕಾರು, ನೀರಿನ ಟ್ಯಾಂಕರ್ ಗೆ ಹಾನಿಯಾಗಿದೆ.

ಮಂಗಳೂರಿನ ರಥಬೀದಿಯ ಪ್ರಮುಖ ಆಕರ್ಷಣೆ ಹಾಗೂ ಜನರ ಪೂಜ್ಯ ಭಾವನೆಯ ಕೇಂದ್ರವಾಗಿ ಈ ಬೃಹತ್ ಮರ ಗುರುತಾಗಿತ್ತು. ದೇವಾಲಯದ ಉತ್ಸವ ಸಂದರ್ಭದಲ್ಲಿ ವಿವಿಧ ಕೈಂಕರ್ಯಗಳಿಗೂ ಈ ಮರ ಸಾಕ್ಷಿಯಾಗುತ್ತಿತ್ತು.

- Advertisement -

Related news

error: Content is protected !!