Friday, April 19, 2024
spot_imgspot_img
spot_imgspot_img

ಮಂಗಳೂರು ವಿವಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ಹೊತ್ತಿದ್ದ ಪ್ರೊಫೆಸರ್​ ಸೇವೆಯಿಂದ ವಜಾ.

- Advertisement -G L Acharya panikkar
- Advertisement -

ಮಂಗಳೂರು(ಅ.30): 2018ರಲ್ಲಿ ಮಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಹೊತ್ತಿದ್ದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಅರಬಿ ಸೇವೆಯಿಂದಲೇ ವಜಾಗೊಳಿಸಲು ವಿವಿ ಸಿಂಡಿಕೇಟ್ ಸಭೆ ನಿರ್ಣಯ ಕೈಗೊಂಡಿದೆ.

2018ರಲ್ಲಿ ಸಂಶೋಧನಾ ವಿದ್ಯಾರ್ಥಿನಿ ಸಾಕ್ಷ್ಯಸಹಿತ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ಈ ಸಂಬಂಧ ಆಯೋಗದ ನೋಟಿಸ್ ನೀಡಿದ್ದು, ವಿವಿ ಆಡಳಿತದ ಸಮಿತಿ ತನಿಖೆ ಕೈಗೊಂಡಿತ್ತು. ಆ ಬಳಿಕ ವರದಿಯನ್ನು 2018ರ ಡಿಸೆಂಬರ್​ನಲ್ಲೇ ಅಂದಿನ ಕುಲಸಚಿವರಾಗಿದ್ದ ಎಂ.ಎಂ.ಖಾನ್​ಗೆ ಸಲ್ಲಿಸಲಾಗಿತ್ತು. ಆದರೆ ವರದಿಯನ್ನು ತೆರೆಯದೇ ಖಾನ್ ಮುಚ್ಚಿಟ್ಟಿದ್ದರು.

ಇತ್ತೀಚೆಗೆ ಮಹಿಳಾ ಆಯೋಗ ವರದಿ ಕೇಳಿದ್ದರಿಂದ ಸಿಂಡಿಕೇಟ್ ಎದುರು ವರದಿ ಪ್ರಸ್ತಾಪ ಮಾಡಿದ್ದು, ವರದಿಯಲ್ಲಿ ಪ್ರೊ.ಅರಬಿ ತಪ್ಪಿತಸ್ಥ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.
ಇದೀಗ ವರದಿ ಮುಚ್ಚಿಟ್ಟಿದ್ದ ಹಿಂದಿನ ಕುಲಸಚಿವ ಎಂ.ಎಂ.ಖಾನ್ ವಿರುದ್ದವೂ ಸರ್ಕಾರಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ.

- Advertisement -

Related news

error: Content is protected !!