Tuesday, June 23, 2026
spot_imgspot_img
spot_imgspot_img

ಮಂಗಳೂರು: ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ನಾಪತ್ತೆ..!

- Advertisement -
- Advertisement -

ಮಂಗಳೂರು: ಪಣಂಬೂರು ಕೈಗಾರಿಕಾ ಪ್ರದೇಶದ ಭಟ್ರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ ಮಹಿಳೆಯೋರ್ವಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ನಾಪತ್ತೆಯಾದ ಮಹಿಳೆಯನ್ನು ಲಕ್ಷ್ಮೀಬಾಯಿ ಪರತಗೌಡ (49) ಎಂದು ಗುರುತಿಸಲಾಗಿದೆ.

ಉರ್ವ ಸ್ಟೋರ್ ಕಡೆಗೆ ಲಕ್ಷ್ಮೀಬಾಯಿ ಪರತಗೌಡ ಅವರು ಜೂನ್ 20, 2025 ರಂದು ಕೆಲಸಕ್ಕೆಂದು ಹೋಗಿದ್ದು ಮರಳಿ ಬಾರದೆ ಕಾಣೆಯಾಗಿದ್ದಾರೆ. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗ ಸಾರ್ವಜನಿಕರಿಂದ ಸಹಾಯ ಕೋರುವಂತೆ ಪೊಲೀಸರು ಪ್ರಕಟಣೆ ನೀಡಿದ್ದಾರೆ.

ಹೆಸರು : ಲಕ್ಷ್ಮೀಬಾಯಿ ಪರತಗೌಡ (49) ಸುಮಾರು 5 ಅಡಿ ಎತ್ತರ, ದಪ್ಪ ಮೈಕಟ್ಟು, ಕಪ್ಪು ಮೈಬಣ್ಣ, ಬಿಳಿ-ಕಪ್ಪು ಮಿಶ್ರಿತ ತಲೆ ಕೂದಲು, ಹಳದಿ ಹಾಗೂ ಕೆಂಪು ಬಣ್ಣದ ಸೀರೆ, ಹಸಿರು ಬಣ್ಣದ ರವಿಕೆ, ಕಿವಿಯಲ್ಲಿ ಬೆಂಡೋಲೆ ಬಟ್ಟೆ ಧರಿಸಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.

ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: ಪಣಂಬೂರು ಪೊಲೀಸ್ ಠಾಣೆ: 0824-2220530, ಮೊಬೈಲ್ ಸಂಖ್ಯೆ: 9480805355, 9480805331,ಮಂಗಳೂರು ನಗರ ಕಂಟ್ರೋಲ್‌ ರೂಮ್‌: 0824-2220800 ಈ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ, ಮೇಲ್ಕಂಡ ನಂಬರ್‌ಗಳಿಗೆ ತಕ್ಷಣವಾಗಿ ಸಂಪರ್ಕಿಸಿ, ಅವರ ಪತ್ತೆಗೆ ಸಹಕರಿಸಲು ಸಾರ್ವಜನಿಕರಿಂದ ಪಣಂಬೂರು ಪೊಲೀಸರು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!