Thursday, August 13, 2026
spot_imgspot_img
spot_imgspot_img

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಕುಡೆ ಕ್ಷೇತ್ರದಲ್ಲಿ “ಡೀ ಡೀ ಆಡ್ಯಾನೆ ರಂಗ ಡೀ ಡೀ ಆಡ್ಯಾನೆ” ದಾಸರ ಪದದ ವೀಡಿಯೋ ಆಲ್ಬಂ ಬಿಡುಗಡೆ

- Advertisement -
- Advertisement -

ಶ್ರೀ ಪ್ರಸನ್ನ ನಾರಾಯಣ ಶೆಟ್ಟಿ ಬೆಳ್ಳಂಪಲ್ಲಿ ಕುಕ್ಕಿಕಟ್ಟೆ ಉಡುಪಿ ಇವರ ನಿರ್ಮಾಣ ದಲ್ಲಿ ಮೂಡಿ ಬಂದ ಡೀ ಡೀ ಆಡ್ಯಾನೆ ರಂಗ ಡೀ ಡೀ ಆಡ್ಯಾನೆ ದಾಸರ ಪದದ ವೀಡಿಯೋ ಆಲ್ಬಂ ಇಂದು ಬಿಡುಗಡೆಗೊಂಡಿತು..

ಈ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಜನೆ ಹಾಗೂ ಕುಣಿತ ಭಜನಾ ತಂಡಗಳಿಗಾಗಿ ನಿರ್ಮಿತವಾದ ಈ ದಾಸರಪದ ಪುತ್ತೂರು ಜಗದೀಶ್ ಆಚಾರ್ಯ ಸಂಗೀತ ನಿರ್ದೇಶನ ಮತ್ತು ಗಾಯನದಲ್ಲಿ. ಹಾಗೂ ಕರಾವಳಿಯ ಪ್ರಸಿದ್ಧ ಗಾಯಕೀಯರ ಸುಶ್ರಾವ್ಯ ಕಂಠದಲ್ಲಿ ಹಾೂ ಪುಟಾಣಿ ಮಕ್ಕಳ ಶ್ರೀ ಕೃಷ್ಣನ ಪಾತ್ರದಲ್ಲಿ ಶ್ರೀ ವಿಜಯ ವಿಠ್ಠಲ ದಾಸರ ರಚನೆಯ ಡೀ ಡೀ ಆಡ್ಯಾನೆ ರಂಗ ಡೀ ಡೀ ಆಡ್ಯಾನೆ ಭಕ್ತಿಗೀತೆ ಪುರಾಣ ಪ್ರಸಿದ್ಧ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಕುಡೆ ಕ್ಷೇತ್ರದಲ್ಲಿ ಬಿಡುಗಡೆಗೊಂಡಿತು .

ರಾಜ್ಯ ಧಾರ್ಮಿಕ ದತ್ತಿಇಲಾಖೆ ಸದಸ್ಯರಾದ ಮಲ್ಲಿಕ ಪ್ರಶಾಂತ್ ಪಕ್ಕಳ ಇವರು ಬಿಡುಗಡೆಗೊಳಿಸಿದರು ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅನುವಂಶಿಕ ಮೋಕ್ತೇಸರಾದ ಶ್ರೀನಿವಾಸ್ ಆಚಾರ್ ಮಂಕುಡೇ ಶುಭಾಶಿರ್ವಾದ ನೀಡಿದರು. ಅತಿಥಿಗಳಾಗಿ ಆಗಮಿಸಿದ ಲಯನ್ಸ್ ವಸಂತ ಶೆಟ್ಟಿ ಎರ್ಮೆನಿಲೆ ಹಾಗೂ ನೋಟರಿ ವಕೀಲರಾದ ಕೃಷ್ಣ ಭಟ್ ಕೇಪು ಹಾಗು ಗಾಯಕಿಯರಾದ ಜನ್ಯ ಪ್ರಸಾದ್ ಅನಂತಾಡಿ, ಉಜ್ವಲ ಆಚಾರ್, ಶ್ರೀವಿಭಾ ವಿಟ್ಲ ಹಾಗೂ ಮಮತ ಆಚಾರ್ ಮತ್ತು ಮೀರ ಭಟ್ ಹಾಗೂ ಪುತ್ತೂರು ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು ಹಾಗು ಭಕ್ತಾದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!