Sunday, June 14, 2026
spot_imgspot_img
spot_imgspot_img

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ಹಾಜರಾಗದೇ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಇಮ್ರಾನ್ ಮಂಜಿಲ್, ಎಮ್ ಜಿ ಎಮ್ -967 ಕಸಬ ಬೆಂಗ್ರೆ ಮಂಗಳೂರು ತಾಲೂಕು ನಿವಾಸಿ ಅಲ್ತಾಪ್ (47) ಎಂದು ಗುರುತಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಮಂಗಳೂರು ಉತ್ತರ ಪೊಲೀಸ್ ಠಾಣಾ ಅಕ್ರ 412/2004 U/s 143,147,148,323,427,506,149 ಐಪಿಸಿ ಪ್ರಕರಣದ ಹಾಗೂ 2 ನೇ ಸಿ.ಜೆ.ಎಂ ನ್ಯಾಯಾಲಯ ಮಂಗಳೂರು ಸಿ. ಸಿ ನಂಬ್ರ 12-2007 ರಲ್ಲಿ ಆರೋಪಿ ಅಲ್ತಾಪ್ ಎಂಬಾತನು ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದು ನ್ಯಾಯಾಲಯವು LPC ಪ್ರಕರಣವೆಂದು ಪರಿಗಣಿಸಿರುತ್ತದೆ.

ಅದರಂತೆ ಆರೋಪಿಯ ಪತ್ತೆಯ ಬಗ್ಗೆ ಉತ್ತರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಎ ಎಸ್ ಐ ಬಾಬು & ಪಿ ಸಿ 3264 ನೇ ಗುರು ಬಿ ಟಿ ಹಾಗೂ ಪಿ ಸಿ 311 ನೇ ಸುನಿಲ್ ಕುಮಾರ್ ಎನ್‌‌ರವರೊಳಗೊಂಡ ತಂಡ ಕಾರ್ಯಾಚರಿಸಿ ದಿನಾಂಕ 05/10/2025 ರಂದು ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ನಗರದ ಬಂದರು ಪರಿಸರದಲ್ಲಿ ದಸ್ತಗಿರಿ ಮಾಡಿ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Related news

error: Content is protected !!