Saturday, July 25, 2026
spot_imgspot_img
spot_imgspot_img

ಮಂಗಳೂರು: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: 17 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತು ಸುಮಾರು 4 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆ. ಅಬ್ದುಲ್ ಬಶೀರ್ @ ಅರ್ಗ ಬಶೀರ್(50) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಮಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯವು ಈತನ ವಿರುದ್ಧ ದಸ್ತಗಿರಿ ಮತ್ತು ಉದ್ಗೋಷಣ ವಾರಂಟ್ ಹೊರಡಿಸಿದ್ದರೂ, ಆತನು ತನ್ನ ಮೂಲ ನಿವಾಸ ತೊರೆದು ಬಂಟ್ವಾಳ ತಾಲೂಕಿನ ಬಿ.ಸಿ ರೋಡ್‌ನ ಪರ್ಲಿಯಾ ಎಂಬಲ್ಲಿ ಬಾಡಿಗೆ ಮನೆಯಲ್ಲಿ ತಲೆಮರೆಸಿಕೊಂಡಿದ್ದನು.

ಮಾಹಿತಿದಾರರ ಖಚಿತ ಮಾಹಿತಿಯ ಆಧಾರದಲ್ಲಿ, ದಿನಾಂಕ ‌ಎಪ್ರಿಲ್ 18 ರಂದು ಸಂಜೆ 7:30ರ ಸುಮಾರಿಗೆ ಪೊಲೀಸರು ದಾಳಿ ನಡೆಸಿ ಬಂಟ್ವಾಳ ತಾಲೂಕಿನ ಬಿ.ಸಿ ರೋಡ್, ಪರ್ಲಿಯ ಎಂಬಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿರುದ್ಧ ಕಳ್ಳತನ, ದರೋಡೆ, ಹಲ್ಲೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿದೆ.

ಈ ಕಾರ್ಯಾಚರಣೆಯನ್ನು ಮೇಲಾಧಿಕಾರಿಗಳ ನಿರ್ದೇಶನದಂತೆ ಮೂಡಬಿದ್ರೆ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿ ನಡೆಸಿದ್ದು, ಈತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡ ಕಾರಣ ಈತನ ವಿರುದ್ಧ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಪ್ರಕರಣಗಳ ವಿವರ:

  1. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 413/2017 PÀ®️A: 379 ಐಪಿಸಿ ಜೋತೆ 34 ಐಪಿಸಿ section: 4,5,7, 8,9, 11 Karnataka Prevention of cow slaughter and cattle Prevention act 1964.
  2. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 439/2017 ಕಲಂ 397,506 ಜೋತೆಗೆ 34 ಐಪಿಸಿ. section: 4,5,7, 8,9, 11 ಗೋ.ಹತ್ಯೆ ನಿಷೇಧ ಕಾಯ್ದೆ.
  3. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 46/2019 ಕಲಂ 143, 147, 148,341, 504, 427, 323, 324, 506 R/W 149 IPC
  4. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 51/2019 ಕಲಂ 379 ಐಪಿಸಿ
  5. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 207/2021 ಕಲಂ 279, 379, 511 ಐಪಿಸಿ ಮತ್ತು 5 ಮತ್ತು 25 ಭಾರತೀಯ ಶಸ್ತ್ರ ಕಾಯ್ದೆ
  6. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 41/2022 ಕಲಂ 323, 324, 365, 506, ಜೋತೆಗೆ 34 ಐಪಿಸಿ
  7. ಮೂಡಬಿದ್ರೆ ಪೊಲೀಸ್ ಠಾಣಾ ಅ.ಕ್ರ 44/2026 ಕಲಂ 208, 269 ಬಿಎನ್.ಎಸ್
  8. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 250/2014 ಕಲಂ 392 ಐಪಿಸಿ section: 4,8,11 Prevention of cruelty to animals act 1960
  9. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 101/2015, ಕಲಂ 143, 147, 148, 448, 323, 324, 504, 363 ಜೊತೆಗೆ 149 ಐಪಿಸಿ
  10. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 199/2016 ಕಲಂ 143, 147, 148,448, 504, 323, 354, 307 ಜೊತೆಗೆÉ 149 ಐಪಿಸಿ
  11. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 200/2016 ಕಲಂ 143,147,148,341,504, 323,324, 307 ಜೋತೆಗೆ 149 ಐಪಿಸಿ
  12. ಬಜ್ಪೆ ಪೊಲೀಸ್ ಠಾಣಾ ಅ.ಕ್ರ 170/2017 ಕಲಂ 379,429 ಐಪಿಸಿ ಮತ್ತು section: 9,4 Prevention of cruelty to animals act 1960, section: 3,4 Karnataka Prevention of cow slaughter and cattle Prevention act 1964.
  13. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 267/2015 ಕಲಂ 379 ಐಪಿಸಿ, section: 11,4,8 Karnataka Prevention of cow slaughter and cattle Prevention act 1964. ಮತ್ತು 11(1)(ಆ) ಮತ್ತು 11(1)(A),20,11(1)(E) Prevention of cruelty to animals act 1960
  14. ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 21/2017 ಕಲಂ 5,8,9,11, ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಮತ್ತು ಕಲಂ 66 ಜೋತೆಗೆÉ 192 ಐ.ಎಂ.ವಿ ಆಕ್ಟ್
  15. ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ 32/2019 ಕಲಂ 279,379 ಐಪಿಸಿ ಮತ್ತು 4,5,8,9,11 Karnataka Prevention of cow slaughter and cattle Prevention act 1964. ಕಲಂ 11(D) Prevention of cruelty to animals act 1960
  16. ಕಳಸ ಪೊಲೀಸ್ ಠಾಣಾ ಅ.ಕ್ರ 77/2018 ಕಲಂ 353, 379 IPC
  17. ಕಳಸ ಪೊಲೀಸ್ ಠಾಣಾ ಅ.ಕ್ರ 33/2019 ಕಲಂ 379 ಐಪಿಸಿ
- Advertisement -

Related news

error: Content is protected !!