- Advertisement -
- Advertisement -



ಮಂಗಳೂರು : ಆರ್ನ ಅಶ್ವಿನ್ ಶೇಖರ್ ಎಂಬ ಹೆಸರಿನ ಇ-ಮೇಲ್ ನಿಂದ ಬಾಂಬ್ ಬೆದರಿಕೆ ಕರೆ ಬಂದಿದ್ದು ಪೊಲೀಸರು ಅಲರ್ಟ್ ಆಗಿದ್ದಾರೆ.ಬಿಜೈ ಬಳಿಯ ಲೂರ್ಡ್ಸ್ ಸ್ಕೂಲಿಗೆ ರಾತ್ರಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು 9.30 ಗಂಟೆಗೆ ಸ್ಫೋಟಿಸುವುದಾಗಿ ಸಂದೇಶ ರವಾನಿಸಿದ್ದಾರೆ.
8 RDX IEDs Planted in School Premises to Blast in Afternoon. Aarna Ashwin Shekher. ಎಂದು ಬೆದರಿಕೆ ಹಾಕಿದ್ದಾರೆ.
ಈ ಇ-ಮೇಲ್ಗಳು ತಮಿಳುನಾಡು ಮೂಲದ ಹೆಸರಿನಿಂದ ಬಂದಿರುವುದಾಗಿ ತಿಳಿದುಬಂದಿದೆ. ಮಾಹಿತಿ ದೊರಕುತ್ತಿದ್ದಂತೆಯೇ ಕದ್ರಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ರಾಜ್ಯದಲ್ಲಿ ಧಾರವಾಡ ನ್ಯಾಯಾಲಯ ಹಾಗೂ ಮಂಗಳೂರು ನ್ಯಾಯಾಲಯ ಸೇರಿ ಹಲವೆಡೆ ಇತ್ತೀಚೆಗೆ ಇದೇ ರೀತಿಯ ಇ-ಮೇಲ್ ಬೆದರಿಕೆಗಳು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಇದುವರೆಗೆ ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement -








