Saturday, June 6, 2026
spot_imgspot_img
spot_imgspot_img

ಮಂಗಳೂರು: ಮಾದಕ ವಸ್ತು ಸೇವನೆ; ಇಬ್ಬರ ಬಂಧನ..!

- Advertisement -
- Advertisement -

ಮಂಗಳೂರು: ಮಾದಕ ವಸ್ತು ಸೇವನೆ ಮಾಡಿದ್ದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ಉರ್ವ ನಿವಾಸಿ ತಿಲಕ್ ರಾಜ್ (29) ಹಾಗೂ ಕೇರಳ ಪಾಲಕ್ಕಾಡ್ ಮೂಲದ ಮೊಹಮ್ಮದ್ ಶಾಮಿಲ್ (22) ಎಂದು ಗುರುತಿಸಲಾಗಿದೆ.

ಪಂಜಿಮೊಗರು ಉರುಂದಾಡಿ ಗುಡ್ಡೆಯ ಸಾರ್ವಜನಿಕ ಮೈದಾನದಲ್ಲಿ ತಿಲಕ್ ರಾಜ್ ಎಂಬಾತನನ್ನು ಹಾಗೂ ಬಾವುಟಗುಡ್ಡೆ ಬಳಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಕೇರಳ ಪಾಲಕ್ಕಾಡ್ ಮೂಲದ ಪಂಪ್‌ವೆಲ್ ಗಾರ್ಡನ್ ಮರೋಳಿ ಬಳಿ ವಾಸವಾಗಿರುವ ಮೊಹಮ್ಮದ್ ಶಾಮಿಲ್ ನನ್ನು ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರೂ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.

- Advertisement -

Related news

error: Content is protected !!