- Advertisement -
- Advertisement -


ಮಂಗಳೂರು: ಅನ್ಯಕೋಮಿನ ವ್ಯಕ್ತಿಯ ಮೇಲೆ ತಂಡವೊಂದು ತಲವಾರು ದಾಳಿಗೆ ಯತ್ನಿಸಿದ್ದು, ಕಾವೂರು ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ನಡೆಸಿ ಕೇವಲ 24 ಗಂಟೆಗಳಲ್ಲಿ ತಲವಾರು ಸಮೇತ ಮೂವರ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪಂಜಿಮೊಗರು ನಿವಾಸಿ ಚರಣ್ ರಾಜ್ (23), ಸುಮಂತ್ ಬರ್ಮನ್ (24), ಅವಿನಾಶ್ (24) ಎನ್ನಲಾಗಿದೆ. ಮಂಗಳೂರು ಹೊರವಲಯದ ಕಾವೂರು ಎಂ.ವಿ.ಶೆಟ್ಟಿ ಕಾಲೇಜು ಬಳಿ ಅನ್ಯಕೋಮಿನ ವ್ಯಕ್ತಿ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಮೂವರು ಆರೋಪಿಗಳು ಸ್ಕೂಟಿಯಲ್ಲಿ ಬಂದು ಅಡ್ಡಹಾಕಿ ತಡೆದು ಮೇಲೆ ತಲವಾರು ಬೀಸಿದ್ದರು. ಈ ವೇಳೆ ವ್ಯಕ್ತಿ ತಪ್ಪಿಸಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮುಖಕ್ಕೆ ಗಾಯವಾಗಿತ್ತು.
ಕಾವೂರು ಪೊಲೀಸ್ ಠಾಣಾ ಪೊಲೀಸರು ಕಾರ್ಯಾಚರಣೆರ ನಡೆಸಿ ಸದ್ಯ 24 ಗಂಟೆಗಳಲ್ಲಿ ಕೃತ್ಯಕ್ಕೆ ಬಳಸಿದ ತಲವಾರು, ವಾಹನ ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
- Advertisement -