- Advertisement -
- Advertisement -






ಬಿಕರ್ನಕಟ್ಟೆ: ನಾಯ್ಕರ ಲೇನ್ ನಲ್ಲಿರುವ ಲೀಲಾವತಿ ಕಾಂಪೌಂಡ್ ನಿವಾಸಿ ಪ್ರವೀಣ್ ಕುಮಾರ್(40) ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಡಿ.14 ರ 6 ಗಂಟೆ ಸುಮಾರಿಗೆ ಹೊರಟು ಹೋದವರು ಈ ತನಕ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಈ ಹಿಂದೆ ಕೂಡ ಮನೆ ಬಿಟ್ಟು ಹೋದವರು 10-15 ದಿನಗಳ ಬಳಿಕ ಮನೆಗೆ ಬಂದಿದ್ದು, ಅದೇ ರೀತಿ ಈ ಸಲವೂ ಕೂಡ ಮನೆಗೆ ಬರುವರೆಂದು ಕಾದು ಮತ್ತು ಹುಡುಕಾಟ ನಡೆಸಿ ಈ ತನಕ ಹುಡುಕಾಡಿದರೂ ಕೂಡ ಪತ್ತೆಯಾಗದೇ ಇರುವುದರಿಂದ ಪ್ರವೀಣ್ ಕುಮಾರ್‌ರ ಸಹೋದರಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಹರೆ:ಸುಮಾರು 5 ಅಡಿ 8 ಇಂಚು ಎತ್ತರವಿದ್ದು, ನೇರ ಗಿಡ್ಡ ತಲೆ ಕೂದಲು, ತಲೆ ಸ್ವಲ್ಪ ಬೋಳಾಗಿರುತ್ತದೆ. ಗಡ್ಡ ಮೀಸೆ ಬೋಳಿಸುತ್ತಾರೆ. ತುಳು, ಕನ್ನಡ, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಸಂಪರ್ಕಿಸಬೇಕಾದ ಸಂಖ್ಯೆ :ಮಂಗಳೂರು ಪೂರ್ವ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 0824-2220520 ಪೊಲೀಸ್ ನಿರೀಕ್ಷಕರು, ಮಂಗಳೂರು ಪೂರ್ವ ಪೊಲೀಸ್
- Advertisement -








