ಕರ್ತವ್ಯದಿಂದ ಅಮಾನತುಗೊಳಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡುವಂತೆ ಸಾಮಾಜಿಕ ಕಾರ್ಯಕರ್ತ ನವೀನ್ ಕುಮಾರ್ ರೈ ಮನವಿ



ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಛೇರಿಯಲ್ಲಿ ಉಪನಿರ್ದೇಶಕಿ ಕೃಷ್ಣವೇಣಿ ಯವರು ಸರಕಾರದ ಆದೇಶ ಇಲ್ಲದೆ ಅಕ್ರಮ ಪ್ರವೇಶ ಮಾಡಿ ಸರಕಾರಿ ಕಛೇರಿಯನ್ನು ದುರಪಯೋಗ ಪಡಿಸಿಕೊಂಡಿರುವ ಬಗ್ಗೆ ಉಳ್ಳಾಲ ವ್ಯಾಪ್ತಿಯಲ್ಲಿ ಸಾರ್ವಜನಿಕ ವಲಯದಿಂದ ಆರೋಪ ಕೇಳಿ ಬಂದಿದೆ.
ಉಳ್ಳಾಲ ಗ್ರಾಮದ ಸರ್ವೆ ನಂಬರ್ 279/5 ರಲ್ಲಿ 1.39 ಎಕ್ಕರೆಯಲ್ಲಿ ನಿರ್ಮಿಸಿದ ಜಮೀನಿನ ಪೈಕಿ ಬಕ 0.35 ಎಕರೆ ಪ್ರದೇಶದಲ್ಲಿ ಮನೆ ಕಟ್ಟುವ ಉದ್ದೇಶದಿಂದ ಕಟ್ಟಡ ಕಟ್ಟಲು ಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದರು.
ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿಯವರು ಸಿಬ್ಬಂದಿ ಪ್ರದೀಪ ಎಂಬುವವರನ್ನು ಕಳುಹಿಸಿ ಫೈಲ್ ಗೆ 50000/- ಮೊತ್ತ ತೆಗೆದುಕೊಳ್ಳಲು ಸೂಚನೆ ನೀಡಿದ್ದರು. ಈ ಬಗ್ಗೆ ಮಂಗಳೂರಿನ ಲೋಕಾಯುಕ್ತ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಪ್ರಮುಖ ಆರೋಪಿಗಳಾದ ಪ್ರದೀಪ್, ಕೃಷ್ಣವೇಣಿಯ ವರ ವಾಹನ ಚಾಲಕರಾದ ಮಧು ಮತ್ತು ಕೃಷ್ಣವೇಣಿಯವರನ್ನು ಬಂಧಿಸಲಾಗಿದೆ. ಆರೋಪಿಗಳ ಪೈಕಿ ಪ್ರದೀಪ್, ಮಧು ಎಂಬವರನ್ನು ಸರಕಾರದ ಆದೇಶ ಪ್ರಕಾರ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಆದರೆ A1 ಆರೋಪಿ ಕೃಷ್ಣವೇಣಿ ಯವರು ಪ್ರಕರಣ ಇರುವಾಗಲೇ ದಿನಾಂಕ 19-06-2025ನೇ ಬುಧವಾರ ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಛೇರಿಯಲ್ಲಿ ಸರಕಾರದ ಆದೇಶ ಇಲ್ಲದೆ ಅಕ್ರಮ ಪ್ರವೇಶ ಮಾಡಿ ಸರಕಾರಿ ಕಛೇರಿಯನ್ನು ದುರಪಯೋಗ ಪಡಿಸಿರುತ್ತಾರೆ. ಇವರ ಇಂತಹ ವರ್ತನೆಯಿಂದ ಇವರ ಮೇಲಿರುವ ಪ್ರಕರಣದ ಸಾಕ್ಷಿ ನಾಶ ಮಾಡುವ ಉದ್ದೇಶವಿರುವುದು ಸಾರ್ವಜನಿಕರಿಗೆ ನೇರ ಕಾಣುತ್ತದೆ. ಆದುದರಿಂದ ಸರಕಾರವು ತಕ್ಷಣ ಅಮಾನತುಗೊಳಿಸಿ ಸರಕಾರಿ ಕಛೇರಿಗೆ ಮತ್ತು ಸಾರ್ವಜನಿಕರಿಗೆ ನ್ಯಾಯ ಒದಗಿಸಿ ಕೊಡುವಂತೆ ದ.ಕ.ಜಿಲ್ಲೆ ಯ ಸಾಮಾಜಿಕ ಹೋರಾಟಗಾರ ನವೀನ್ ಕುಮಾರ್ ರೈ ಮನವಿ ಮಾಡಿದ್ದಾರೆ.