Sunday, June 7, 2026
spot_imgspot_img
spot_imgspot_img

ಮಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಕಂಟೈನರ್ ಲಾರಿಗೆ ಸ್ಕೂಟರ್ ಡಿಕ್ಕಿ; ಸವಾರ ಸಾವು..!

- Advertisement -
- Advertisement -

ಮಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಕಂಟೈನರ್ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ನಗರದ ಬಲ್ಮಠದಲ್ಲಿ ನಡೆದಿದೆ.

ಮೃತ ಸ್ಕೂಟರ್ ಸವಾರನನ್ನು ಮೇಲೋರಿ ಶಾನ್ ಡಿಸೋಜ (24) ಎಂದು ಗುರುತಿಸಲಾಗಿದೆ.

ಶಾನ್ ಡಿಸೋಜ ತನ್ನ ಸ್ಕೂಟರ್‌ನಲ್ಲಿ ಬಲ್ಮಠ ಕಡೆಯಿಂದ ಹಂಪನಕಟ್ಟೆ ಕಡೆಗೆ ತೆರಳುತ್ತಿದ್ದಾಗ ಬಲ್ಮಠ ರಸ್ತೆಯಲ್ಲಿರುವ ಅರವಿಂದ ಶೋರೂಮ್ ಮುಂದಿನ ಮುಖ್ಯರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಂಟೇನರ್ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರ ಗಾಯಗೊಂಡಿದ್ದ ಶಾನ್ ಡಿಸೋಜರನ್ನು ಸಾರ್ವಜನಿಕರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಶಾನ್ ಡಿಸೋಜ ಮೃತಪಟ್ಟಿದ್ದಾರೆ. ಈ ಬಗ್ಗೆ ಶಾನ್ ಡಿಸೋಜರ ತಂದೆ ಮ್ಯಾಥ್ಯು ಲೀವೋ ಡಿಸೋಜ ನೀಡಿದ ದೂರಿನಂತೆ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!