Tuesday, April 30, 2024
spot_imgspot_img
spot_imgspot_img

ಮಂಗಳೂರು: ರೋಬೋಟ್ ಮೂಲಕ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿತ್ತು ಆ ತಂಡ; ಎನ್‌ಐಎ ತನಿಖೆ ವೇಳೆ ಸ್ಫೋಟಕ ಸಂಗತಿ ಬಯಲು

- Advertisement -G L Acharya panikkar
- Advertisement -

ಮಂಗಳೂರಿನಲ್ಲಿ ನಡೆದ ಕುಕ್ಕರ್​ ಬಾಂಬ್​ ಬ್ಲಾಸ್ಟ್​ ಪ್ರಕರಣದ ಬೆನ್ನು ಹತ್ತಿದ್ದ ಎನ್​ಐಎ ವಿಚಾರಣೆ ನಡೆಸಿದಂತೆ ಹೊಸ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಇದೀಗ ರೋಬೋಟ್ ಮೂಲಕ ವಿಧ್ವಂಸಕ ಕೃತ್ಯಕ್ಕೆ ಆರೋಪಿಗಳು ಸಂಚು ರೂಪಿಸಿದ್ದರು ಎಂಬ ವಿಚಾರ ಬಯಲಾಗಿದೆ.

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್ ಕುರಿತಂತೆ ತನಿಖೆ ನಡೆಸಿದ ಎನ್​ಐಎ 2 ಪ್ರಕರಣಗಳ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನ್ಯಾಷನಲ್​ ಇನ್ವೆಸ್ಟಿಗೇಶನ್​ ಏಜೆನ್ಸಿಗೆ ಕೆಲವೊಂದು ಸ್ಫೋಟಕ ಮಾಹಿತಿ ಸಿಕ್ಕಿವೆ. ಹಾಗಾಗಿ ಎನ್​ಐಎ ಅಧಿಕಾರಿಗಳು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

ಶಂಕಿತ ಉಗ್ರರಾದ ಮೊಹಮ್ಮದ್​ ಶಾರೀಕ್,​ ಮಾಜ್​ ಮುನೀರ್​ ಅಹಮದ್, ಸೈಯದ್​ ಯಾಸಿನ್​, ರಿಶಾನ್​​ ತಾಜುದ್ದೀನ್​ ಶೇಖ್, ಹುಜೇರ್​ ಫರ್ಹಾನ್​​ ಬೇಗ್​, ಮಜಿನ್​ ಅಬ್ದುಲ್​​ ರಹಮಾನ್​, ನದೀಮ್​ನನ್ನು ವಿಚಾರಣೆ ನಡೆಸುವ ವೇಳೆ ಕೆಲವೊಂದು ಸಂಗತಿಗಳು ಬಾಯ್ಬಿಟ್ಟಿದ್ದಾರೆ.

ವಿಚಾರಣೆ ವೇಳೆ, ವಿದೇಶದಲ್ಲಿರುವ ಐಸಿಸ್‌ ಉಗ್ರರ ಜೊತೆ ನೇರ ಸಂಪರ್ಕದಲ್ಲಿದ್ದ ವಿಚಾರ ತಿಳಿದುಬಂದಿದೆ. ಅಲ್ಲದೆ, ಭವಿಷ್ಯದ ಭಯೋತ್ಪಾದಕ ಚಟುವಟಿಕೆಗೆ ಸಿದ್ಧರಾಗುವಂತೆ ಆರೋಪಿಗಳಿಗೆ ಸೂಚಿಸಿದ್ದ ಐಸಿಸ್ ಹ್ಯಾಂಡ್ಲರ್, ರೋಬೋಟಿಕ್ ಕೋರ್ಸ್ ಓದುವಂತೆ ನಿರ್ದೇಶನ ನೀಡಿದ್ದ ಎನ್ನುವ ಸ್ಫೋಟಕ ಮಾಹಿತಿಯನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.

- Advertisement -

Related news

error: Content is protected !!