Sunday, May 5, 2024
spot_imgspot_img
spot_imgspot_img

ಮಂಗಳೂರು: ಮಹಿಳೆಯೋರ್ವರ ಖಾಸಗಿ ಫೋಟೋ ಮತ್ತು ವೀಡಿಯೋಗಳನ್ನು ತೆಗೆದು ಬೆದರಿಕೆ; ತಿಂಗಳಿಗೆ 20 ಸಾವಿರ ರೂ. ವಸೂಲಿ

- Advertisement -G L Acharya panikkar
- Advertisement -

ಮಂಗಳೂರು: ಮಹಿಳೆಯೋರ್ವರ ಖಾಸಗಿ ಫೋಟೋ ಮತ್ತು ವೀಡಿಯೋಗಳನ್ನು ತೆಗೆದು, ಬೆದರಿಕೆಯೊಡ್ಡಿ ಹಣ ಪಡೆದು ಮಾನಸಿಕ ಹಿಂಸೆ ನೀಡಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಂಜಿತ್ ಶೆಟ್ಟಿ ಪ್ರಕರಣದ ಆರೋಪಿ.

ಮಹಿಳೆಗೆ ಫೇಸ್ ಬುಕ್‌ ಮೂಲಕ ಆರೋಪಿಯ ಪರಿಚಯವಾಗಿತ್ತು. ಅನಂತರ ಇಬ್ಬರು ಕೂಡ ಅನ್ಯೋನ್ಯವಾಗಿದ್ದರು. ಈ ಸಂದರ್ಭ ಆರೋಪಿಯು ಮಹಿಳೆಯ ಖಾಸಗಿ ಪೋಟೋ ಮತ್ತು ವಿಡಿಯೋ ತೆಗೆದಿದ್ದ ಇದರಿಂದ ಮಹಿಳೆ ಈತನಿಂದ ದೂರವಾಗಿದ್ದರು.

ಆಗ ಆರೋಪಿ ಪೋಟೊ ಮತ್ತು ವಿಡಿಯೋಗಳನ್ನು ಜಾಲತಾಣದಲ್ಲಿ ಹಾಕಿ ಬೆದರಿಸಿ ಪ್ರತಿ ತಿಂಗಳು 20 ಸಾವಿರ ರೂಪಾಯಿ ಹಣವನ್ನು ಒತ್ತಾಯಪೂರ್ವಕವಾಗಿ ಪಡೆದುಕೊಂಡಿದ್ದ. ಅಲ್ಲದೆ ಆಕೆಯ ಕಚೇರಿಯ ಇಮೇಲ್ ಮತ್ತು ಸಹದ್ಯೋಗಿಗಳ ಮೊಬೈಲ್ ಗಳಿಗೆ ಪೋಟೊ ಮತ್ತು ವೀಡಿಯೋ ಕಳುಹಿಸಿ ಮಾನಹಾನಿಗೆ ಯತ್ನಿಸಿದ್ದ ಎನ್ನಲಾಗಿದೆ.

- Advertisement -

Related news

error: Content is protected !!