Monday, June 15, 2026
spot_imgspot_img
spot_imgspot_img

ಮಂಗಳೂರು: ಗಾಳಿ ಮಳೆಗೆ ರಸ್ತೆ ಮೇಲೆ ಉರುಳಿ ಬಿದ್ದ ಮರ..!

- Advertisement -
- Advertisement -

ಮಂಗಳೂರು: ನಗರದಲ್ಲಿ ಮುಂದುವರಿದ ಮಳೆಯ ಅರ್ಭಟಕ್ಕೆ ಜನರು ಹೈರಾಣಾಗಿದ್ದಾರೆ. ಒಂದೆಡೆ ಧಾರಾಕಾರವಾಗಿ ವರ್ಷಧಾರೆ ಇಳೆಗೆ ಹರಿಯುತ್ತಿದ್ದರೆ, ಮತ್ತೊಂದೆಡೆ ನಗರದ ಲಾಲ್ ಭಾಗ್‌ನಲ್ಲಿ ಪಬ್ಬಾಸ್ ಮುಂದುಗಡೆ ರಸ್ತೆ ಮೇಲೆ ಮರ ಉರುಳಿ ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಇನ್ನು ಪಾಲಿಕೆ ಕೂಡ ಎಚ್ಚೆತ್ತುಕೊಂಡಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗುವ ಸಾಧ್ಯತೆ ಕಂಡುಬರುವ ಮರಗಳ ತೆರವುಗೊಳಿಸುವ ಕೆಲಸದಲ್ಲಿ ಅಗ್ನಿ ಶಾಮಕ ತಂಡ ತೊಡಗಿಕೊಂಡಿದೆ. ನಿನ್ನೆ ರಾತ್ರಿಯಿಂದಲೇ ದ.ಕ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಉಳ್ಳಾಲ ಸೇರಿದಂತೆ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ.

ಇನ್ನು ಜಿಲ್ಲೆಯಾದ್ಯಂತ ಮೇ 21- ಮೇ 23ರವರೆಗೆ ಆರೆಂಜ್ ಮತ್ತು ರೆಡ್‌ ಅಲರ್ಟ್‌ ಇರಲಿದೆ. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!