Monday, July 27, 2026
spot_imgspot_img
spot_imgspot_img

ಮಂಗಳೂರು: ಮಾದಕವಸ್ತು ಮಾರಾಟಕ್ಕೆ ಬಂದ ಇಬ್ಬರ ಬಂಧನ – ಪ್ರಕರಣ ದಾಖಲು

- Advertisement -
- Advertisement -

₹18.72 ಲಕ್ಷ ಮೌಲ್ಯದ ಸೊತ್ತು ವಶ

ಮಂಗಳೂರು: ಫೆ27 ರಂದು ಸುರತ್ಕಲ್ ಠಾಣಾ ವ್ಯಾಪ್ತಿಯ ಮುಕ್ಕಾ ಪ್ರದೇಶದಲ್ಲಿರುವ ವೇಯಿಂಗ್ ಬ್ರಿಡ್ಜ್ ಬಳಿ MDMA ಮಾದಕವಸ್ತು ಮಾರಾಟಕ್ಕೆ ವ್ಯಕ್ತಿ ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಸಂಜೆ ಸುಮಾರು 4:15 ಗಂಟೆಗೆ ಸುರತ್ಕಲ್ ಠಾಣಾ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ KA-20-MC-1703 ಮತ್ತು KA-19-MR-5180 ಸಂಖ್ಯೆಯ ಎರಡು ಕಾರುಗಳು ಅಕ್ಕಪಕ್ಕ ನಿಂತಿರುವುದು ಕಂಡುಬಂದಿತು. KA-20-MC-1703 ಕಾರಿನಲ್ಲಿ ಕಾವು ನಿವಾಸಿ ಝಕಾರಿಯಾ (38) ಮತ್ತು ಮಿಥುನ್ ಪೂಜಾರಿ (23) ಇದ್ದರು.

ವಿಚಾರಣೆಯಲ್ಲಿ ಆರೋಪಿಗಳು ಸುರತ್ಕಲ್ ಪರಿಸರದ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ MDMA ಮಾದಕವಸ್ತು ಮಾರಾಟ ಮಾಡಲು ಬಂದಿರುವುದು ತಿಳಿದುಬಂದಿದೆ. ಪೊಲೀಸರು ಆರೋಪಿಗಳ ವಶದಿಂದ ಒಟ್ಟು 54.06 ಗ್ರಾಂ MDMA ಮಾದಕವಸ್ತು (ಅಂದಾಜು ಮೌಲ್ಯ ₹5,41,000) ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಕೃತ್ಯಕ್ಕೆ ಬಳಸಿದ ಸುಮಾರು ₹13 ಲಕ್ಷ ಮೌಲ್ಯದ ಎರಡು ಕಾರುಗಳು, ₹20,000 ಮೌಲ್ಯದ ಎರಡು ಮೊಬೈಲ್ ಫೋನ್‌ಗಳು ಹಾಗೂ ₹11,700 ನಗದು ಸಹ ಸ್ವಾಧೀನಪಡಿಸಲಾಗಿದೆ. ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ₹18,72,700 ಆಗಿದೆ.

ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!