Wednesday, April 23, 2025
spot_imgspot_img
spot_imgspot_img

ಮಾವಿನ ಹಣ್ಣಿನ ಪಾಯಸ

- Advertisement -
- Advertisement -

ಹಣ್ಣುಗಳ ರಾಜ ಮಾವಿನ ಹಣ್ಣಿನ ರುಚಿಗೆ ಮನಸೋಲದವರು ಯಾರಿದ್ದಾರೆ ಹೇಳಿ. ಸೀಜನ್ ನಲ್ಲಿ ಮಾವಿನ ಹಣ್ಣನ್ನು ತಿನ್ನದವರೇ ಇಲ್ಲವೆನ್ನಬಹುದು. ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರಿಗೂ ಮಾವಿನ ಹಣ್ಣು ಕಂಡರೆ ಸಾಕು, ತಿನ್ನಬೇಕೆನಿಸುತ್ತದೆ. ಮಾವಿನ ಹಣ್ಣಿನ ಪಾಯಸ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು:
ಮಾವಿನ ಹಣ್ಣು – 1, ಬಾಸ್ಮತಿ ಅಕ್ಕಿ (ಬಿಳಿ ಅಕ್ಕಿ) – 2 ಚಮಚ, ಸಕ್ಕರೆ – 3 ಚಮಚ, ಬಾದಾಮಿ – 5, ಕೇಸರಿ – ಸ್ವಲ್ಪ, ಪಿಸ್ತಾ – 1 ಚಮಚ (ಸಣ್ಣಗೆ ತುಂಡರಿಸಿದ್ದು) , ಕೆನೆಭರಿತ ಹಾಲು – ಎರಡೂವರೆ ಕಪ್

ಎರಡು ಪ್ರತ್ಯೇಕ ಕಪ್‍ಗಳಲ್ಲಿ ಬಾದಾಮಿ ಮತ್ತು ಅಕ್ಕಿಯನ್ನು ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕೆಲ ನಿಮಿಷಗಳ ಕಾಲ ನೆನೆಸಿಡಿ. ಒಂದು ಕಪ್ ನಲ್ಲಿ 4 ಚಮಚದಷ್ಟು ಬೆಚ್ಚಗಿನ ಹಾಲು ತೆಗೆದುಕೊಂಡು ಅದಕ್ಕೆ ಕೇಸರಿ ಎಲೆಗಳನ್ನು ಹಾಕಿಡಿ. ಬಾದಾಮಿ ಮೇಲಿನ ಸಿಪ್ಪೆಯನ್ನು ತೆಗೆದಿಟ್ಟುಕೊಳ್ಳಿ. ಮಿಕ್ಸಿ ಜಾರಿಗೆ ಅಕ್ಕಿ, ಬಾದಾಮಿ ಮತ್ತು ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಹಾಲನ್ನು ಕೆನೆ ಬರುವವರೆಗೆ ಕುದಿಸಿ ನಂತರ ಅದಕ್ಕೆ ಗ್ರೈಂಡ್ ಮಾಡಿದ ಅಕ್ಕಿ ಮತ್ತು ಬಾದಾಮಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ. ಹಾಲು ಗಟ್ಟಿಯಾಗುವ ಹಂತಕ್ಕೆ ಬಂದಾಗ ಸಕ್ಕರೆ ಬೆರೆಸಿ. ನಂತರ ಕೇಸರಿ ಹಾಕಿರೋ ಹಾಲನ್ನ ಅದಕ್ಕೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಾವಿನ ಹಣ್ಣಿನ ಸಿಪ್ಪೆ ತೆಗೆದು ಅದನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಕುದಿಯುತ್ತಿರುವ ಪಾಯಸಕ್ಕೆ ಮಾವಿನ ಹಣ್ಣಿನ ಪೇಸ್ಟ್ ಹಾಕಿ, ಮತ್ತೆ ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಪಾಯಸವನ್ನ ಒಲೆಯಿಂದ ಕೆಳಗಿಳಿಸಿ, ನಂತರ ಅದರ ಮೇಲೆ ಸಣ್ಣಗೆ ಕಟ್ ಮಾಡಿದ ಬಾದಾಮಿ, ಪಿಸ್ತಾ ಹಾಕಿದ್ರೆ ಮಾವಿನ ಹಣ್ಣಿನ ಪಾಯಸ ಸವಿಯಲು ಸಿದ್ಧ.

- Advertisement -

Related news

error: Content is protected !!