Friday, July 24, 2026
spot_imgspot_img
spot_imgspot_img

ಮಾಣಿ: ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ಇದರ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮ

- Advertisement -
- Advertisement -

ಮಾಣಿ : ಸೋಶಿಯಲ್ ಇಖ್ವಾ ಫೆಡರೇಶನ್, ಇಖ್ವಾ ಎಜ್ಯುಕೇಶನಲ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಸೆಂಟರ್ ಇದರ ನೂತನ ಕಛೇರಿ ಉದ್ಘಾಟನೆ ಸೂರಿಕುಮೇರು ಜುಮಾ ಮಸೀದಿ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು.

ನೂತನ ಕಛೇರಿಯನ್ನು ಪಿಡಬ್ಲ್ಯೂಡಿ ಗುತ್ತಿಗೆದಾರ ಉಮ್ಮರ್ ಹಾಜಿ ರಾಜ್ ಕಮಲ್ ಉದ್ಘಾಟಿಸಿದರು. ಫೆಡರೇಶನ್ ಅಧ್ಯಕ್ಷ ಅಬ್ದುಲ್ ರಹೀಂ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು. ಸೂರಿಕುಮೇರು ಜುಮಾ ಮಸೀದಿ ಮುದರ್ರಿಸ್ ಹಸೈನಾರ್ ಸಅದಿ ದು:ಹಾ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಮೀದ್ ಮಾಸ್ಟರ್ ಮಾಣಿ ಮಾತನಾಡಿ ಆರೋಗ್ಯ, ಶಿಕ್ಷಣ, ಅಂಬುಲೆನ್ಸ್ ಸೇವೆಯಂತಹ ಸಾಮಾಜಿಕ ಕಳಕಳಿಯಿಂದ ಕೂಡಿದ ಉತ್ತಮ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸೋಶಿಯಲ್ ಇಖ್ವಾ ಫೆಡರೇಶನ್ ಸಂಸ್ಥೆಯು ಯಾವುದೇ ರೀತಿಯ ಟೇಕೆ ಟಿಪ್ಪಣಿಗಳಿಗೆ ಕುಗ್ಗದೆ ಸದಾ ನಿಮ್ಮ ಉದ್ದೇಶಿತ ಸೇವೆಯನ್ನು ಮುಂದುವರಿಸಿಕೊಂಡು ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಿ ಎಂದರು.

ಪತ್ರಕರ್ತ ಲತೀಫ್ ನೇರಳಕಟ್ಟೆ, ‌ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಪೂರ್ವಾದ್ಯಕ್ಷ ಸುಲೈಮಾನ್ ಸೂರಿಕುಮೇರು ಶುಭ ಹಾರೈಸಿದರು.

ಯುನೈನ್ ಬೀಡಿ ಉದ್ಯಮಿ ಹಾಜಿ ಅಹ್ಮದ್ ಖಾನ್ ಕೊಡಾಜೆ, ಸುಲ್ತಾನ್ ಗ್ರೂಪ್ಸ್ ನ ಮೆನೇಜಿಂಗ್ ಡೈರೆಕ್ಟರ್ ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್, ಮುಸ್ಲಿಂ ಸೆಂಟ್ರಲ್ ಕಮಿಟಿ ಸದಸ್ಯ ಹನೀಫ್ ಖಾನ್ ಕೊಡಾಜೆ, ಉದ್ಯಮಿ ಝಕರಿಯ ನೀರಪಾದೆ, ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಕೆ.ಬಿ.ಸಲೀಂ ಹಾಜಿ ಅತಿಥಿಗಳಾಗಿ ಭಾಗವಹಿಸಿದ್ದರು.

ಸೋಶಿಯಲ್ ಇಖ್ವಾ ಫೆಡರೇಶನ್ ಕಾರ್ಯದರ್ಶಿ ರಶೀದ್ ನೀರಪಾದೆ ಪ್ರಸ್ತಾವನೆಗೈದರು. ಇಂಜಿನಿಯರ್ ನವಾಝ್ ನೇರಳಕಟ್ಟೆ ಸ್ವಾಗತಿಸಿ, ಗಫೂರ್ ಬುಡೋಳಿ ವಂದಿಸಿದರು. ರಿಯಾಝ್ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!