Friday, April 26, 2024
spot_imgspot_img
spot_imgspot_img

ಮಾಣಿ: ಬದ್ರಿಯಾ ಜುಮಾ ಮಸೀದಿ ಇದರ ಸ್ವಲಾತ್ ವಾರ್ಷಿಕ ಹಾಗೂ ಮತಪ್ರಭಾಷಣ

- Advertisement -G L Acharya panikkar
- Advertisement -

ಮಾಣಿ: ಬಿಲ್ಕೀಸ್ ರಾಣಿಯ ಸಿಂಹಾಸನದ ಚರಿತ್ರೆಯು ಮುಜಿಝತ್ ಮೂಲಕ ನಡೆದರೆ ಔಲಿಯಾಗಳ ಪವಾಡವು ಕರಾಮತ್ ಮೂಲಕ ನಡೆಯುತ್ತದೆ. ಇಲ್ಮ್ ಇರುವವರಿಗೆ ಅಲ್ಲಾಹನು ನೀಡುವ ಪವರ್ ಆಗಿದೆ ಕರಾಮತ್, ಅವರ ಸ್ಥಾನಮಾನಗಳನ್ನು ಅಲ್ಲಾಹನು ಉನ್ನತಿಗೇರಿಸಿರುವುದರಿಂದ ಆಗಿದೆ. ಉರೂಸ್ ಮೂಲಕ ಇಂದಿಗೂ ನಾವು ಆ ಮಹಾನರುಗಳನ್ನು ಸ್ಮರಿಸಲ್ಪಡುತ್ತಿರುವುದು ಎಂದು ಕಾಸರಗೋಡು ಬದರ್ ಜುಮಾ ಮಸ್ಜಿದ್ ಖತೀಬ್ ಅಶ್ಫಾಕ್ ಫೈಝಿ ನಂದಾವರ ಹೇಳಿದರು.

ಅವರು ಬದ್ರಿಯಾ ಜುಮಾ ಮಸೀದಿ ಸೂರಿಕುಮೇರು ಇದರ 23 ನೇ ಸ್ವಲಾತ್ ವಾರ್ಷಿಕದಲ್ಲಿ ಮುಖ್ಯ ಪ್ರಭಾಷಣ ಮಾಡಿದರು. ಸ್ವಲಾತ್ ಸರ್ವ ಸಮಸ್ಯೆಗಳಿಗೂ ಪರಿಹಾರವಾಗಿದೆ. ಸ್ವಲಾತ್ ಹೆಚ್ಚಿಸುವುದರಿಂದ ಇಹ ಮತ್ತು ಪರಲೋಕವನ್ನು ಗೆಲ್ಲಬಹುದು ಎಂದು ಮೊದಲ ದಿನದ ಪ್ರಭಾಷಣದಲ್ಲಿ ತುರ್ಕಳಿಕೆ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಬಾಖವಿ ಹೇಳಿದರು.

ಸಯ್ಯಿದ್ ಶರಫುದ್ದೀನ್ ಅಲ್ ಹಾದಿ ತಂಙಳ್ ಪುತ್ತೂರು ಸ್ವಲಾತ್ ವಾರ್ಷಿಕದ ನೇತೃತ್ವ ವಹಿಸಿ ದುಆ ನಡೆಸಿಕೊಟ್ಟರು. ಮೂಸಾ ಕರೀಂ ಮಾಣಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖತೀಬ್ ಡಿ ಎಸ್ ಅಬ್ದುರ್ರಹ್ಮಾನ್ ಮದನಿ ಉಳ್ತೂರು ಮತ್ತು ಸದರ್ ಅಬ್ದುಸ್ಸಲಾಂ ಹನೀಫಿ ಕಬಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಅಲ್ಲಿಂ ಸುಲೈಮಾನ್ ಮುಸ್ಲಿಯಾರ್ ಸ್ವಾಗತಿಸಿದರು. ಕಾರ್ಯದರ್ಶಿ ಅಮೀರುದ್ದೀನ್ ಸೂರಿಕುಮೇರು ಧನ್ಯವಾದಗೈದರು.

- Advertisement -

Related news

error: Content is protected !!