Monday, July 27, 2026
spot_imgspot_img
spot_imgspot_img

ಮಾಣಿ : ರಮಳಾನ್ ಪೂರ್ವ ಸಿದ್ದತೆ ಹಾಗೂ ದಾರುಲ್ ಮುಸ್ತಫಾ ದಶಮಾನೋತ್ಸವ ಪ್ರಚಾರ ಸಂಗಮ

- Advertisement -
- Advertisement -

ಮಾಣಿ : ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವಜನ ಸಂಘ ಹಾಗೂ ಸುನ್ನೀ ವಿಧ್ಯಾರ್ಥಿಗಳ ಸಂಘ ಮಾಣಿ ಸರ್ಕಲ್, ಸೆಕ್ಟರ್ ಜಂಟಿ ಆಶ್ರಯದಲ್ಲಿ ರಮಳಾನ್ ಪೂರ್ವ ಸಿದ್ದತಾ ತರಗತಿ ಹಾಗೂ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರ ಸಾರಥ್ಯದಲ್ಲಿ ನಡೆಯುತ್ತಿರುವ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೆಟ್ಟು ಇದರ ದಶಮಾನೋತ್ಸವದ ಪ್ರಚಾರ ಸಂಗಮವು 2026 ಫೆಬ್ರವರಿ 10 ರಂದು ದಾರುಲ್ ಇರ್ಶಾದ್ ಮಾಣಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಅಧ್ಯಕ್ಷರಾದ ಇಬ್ರಾಹಿಂ ಸ‌ಅದಿ ಮಾಣಿ ಉಸ್ತಾದರು ವಹಿಸಿದರು. ಅಲ್ ಮುರ್ಶಿದ್ ಅಕಾಡೆಮಿ ಕುದುಂಬ್ಲಾಡಿ ವಿಧ್ಯಾ ಸಂಸ್ಥೆಯ ಸಾರಥಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಉಸ್ತಾದರು ದುಆ ನೆರೆವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‌ವೈಎಸ್ ದ. ಕ. ಜಿಲ್ಲಾ ಸದಸ್ಯರಾದ ಹೈದರ್ ಸಖಾಫಿ ಶೇರಾ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಕೇಂದ್ರ ಬಿಂದು ಯುವ ವಿದ್ವಾಂಸ, ವಾಗ್ಮಿ, ಸಾಮಾಜಿಕ ಜಾಲತಾಣ ಯೂಟ್ಯೂಬ್ ಭಾಷಣಗಾರ ಮುಹಮ್ಮದ್ ಇರ್ಶಾದ್ ಸ‌ಅದಿ ಕಾಪು ರವರು ರಮಳಾನ್ ಪೂರ್ವ ಸಿದ್ದತೆ ವಿಷಯದಲ್ಲಿ ಸಮಗ್ರ ಅಧ್ಯಯನ ತರಗತಿ ನಡೆಸಿಕೊಟ್ಟರು. ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರ ಸಾರಥ್ಯದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೆಟ್ಟು ವಿಧ್ಯಾ ಸಂಸ್ಥೆಯ ದಶಮಾನೋತ್ಸವದ ಪ್ರಚಾರ ಭಾಷಣವನ್ನು ಯುವ ವಿದ್ವಾಂಸ, ವಾಗ್ಮಿ ಮ‌ಅ್‌ರೂಫ್ ಸುಲ್ತಾನಿ ಅಲ್ ಫುರ್ಖಾನಿ ಆತೂರವರು ನಡೆಸಿ, 2026 ಫೆಬ್ರವರಿ 13, 14, 15 ರಂದು ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ದಾರುಲ್ ಮುಸ್ತಫಾ ಪ್ರಚಾರ ಅಂಗವಾಗಿ ಪೋಸ್ಟರ್ ಪ್ರದರ್ಶಿಸಲಾಯಿತು. ಎಸ್ಸೆಸ್ಸೆಫ್ ದ. ಕ. ಈಸ್ಟ್ ಜಿಲ್ಲಾ ನಾಯಕರಾದ ಸಯ್ಯಿದ್ ಸಾಬಿತ್ ತಂಙಳ್ ಸಖಾಫಿ ಅಲ್ ಮುಈನಿ ಪಾಟ್ರಕೋಡಿ ತಂಙಳ್ ರವರು ಕೊನೆಯಲ್ಲಿ ದುವಾಗೆ ನೇತೃತ್ವ ವಹಿಸಿದರು.

ವೇದಿಕೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯರೂ, ದ. ಕ. ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ಪುತ್ತೂರು, ಝೋನ್ ಉಪಾಧ್ಯಕ್ಷರಾದ ಯೂಸುಫ್ ಹಾಜಿ ಸೂರಿಕುಮೇರ್, ಸರ್ಕಲ್ ಉಪಾಧ್ಯಕ್ಷರಾದ ದಾವೂದ್ ಕಲ್ಲಡ್ಕ, ಕೋಶಾಧಿಕಾರಿ ಮುಹಮ್ಮದ್ ಹಬೀಬ್ ಶೇರಾ, ದಾರುಲ್ ಇರ್ಶಾದ್ ಮದರಸ ಮುಖ್ಯೋಪಾದ್ಯರಾದ ನಝೀರ್ ಅಮ್ಜದಿ, ಎಸ್ಸೆಸ್ಸೆಫ್ ಜಿಲ್ಲಾ ನಾಯಕರಾದ ಸಾಬಿತ್ ಪಾಟ್ರಕೋಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸರ್ಕಲ್ ವ್ಯಾಪ್ತಿಯ ಸುನ್ನಿ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು, ಮಹಿಳೆಯರು ಹಾಗೂ ಹಿತೈಷಿಗಳು ಭಾಗವಹಿಸಿದರು.

ಎಸ್‌ವೈಎಸ್ ಮಾಣಿ ಸರ್ಕಲ್ ಪ್ರಧಾನ ಕಾರ್ಯದರ್ಶಿ ಪಿ. ಎಚ್. ಉಮರುಲ್ ಫಾರೂಖ್ ಹನೀಫಿ ಉಸ್ತಾದರು ಸ್ವಾಗತಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ ನೆಲ್ಲಿ ಧನ್ಯವಾದಗೈದರು,ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!