Thursday, June 18, 2026
spot_imgspot_img
spot_imgspot_img

ಮಾಣಿ: ರಿಫಾಈ ಶೈಖ್(ರ) ಅನುಸ್ಮರಣೆ, ಮಹ್‌ಳರತುಲ್ ಬದ್ರಿಯಾ,ಅಭಿನಂದನಾ ಕಾರ್ಯಕ್ರಮ

- Advertisement -
- Advertisement -

ಮಾಣಿ : ಕರ್ನಾಟಕ ಮುಸ್ಲಿಂ ಜಮಾ‌ಅತ್, ಸುನ್ನೀ ಯುವಜನ ಸಂಘ, ಸುನ್ನೀ ಸ್ಟೂಡೆಂಟ್ ಫೆಡರೇಶನ್ ಸೂರಿಕುಮೇರು ಯುನಿಟ್ ವತಿಯಿಂದ ರಿಫಾಈ ಶೈಖ್ (ರ) ರವರ ಅನುಸ್ಮರಣೆ, ಮಹ್‌ಳರತುಲ್ ಬದ್ರಿಯಾ, ಮತ್ತು ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ನಡೆಸಿದ ಸಾಹಿತ್ಯೋತ್ಸವ ಸ್ಪರ್ಧೆಯಲ್ಲಿ ರನ್ನರ್ಸ್ ಚಾಂಪಿಯನ್ ಪಡೆದ ಸೂರಿಕುಮೇರು ಯುನಿಟ್ ತಂಡಕ್ಕೆ ಅಭಿನಂದನಾ ಕಾರ್ಯಕ್ರಮವು ಸಂಜರಿ ಕಾಂಪ್ಲೆಕ್ಸ್ ನಲ್ಲಿ ಸೋಮವಾರ ನಡೆಯಿತು.

ಅಲ್ ಮುರ್ಶಿದ್ ಅಕಾಡೆಮಿ ಕುದುಂಬ್ಲಾಡಿ, ಕೆದಿಲ ಇದರ ಚೆಯರ್‌ಮೆನ್ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಮಂಜನಾಡಿ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ದುಆಗೈದು ಮಾತನಾಡಿದರು, ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ಕೆಎಂಜೆ ನಾಯಕರ ಯುನಿಟ್ ಭೇಟಿ ಕಾರ್ಯಕ್ರಮದ ವಿವರಣೆ ನೀಡಿದರು, ಬಳಿಕ ಪ್ರತಿಭೆಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಎಂಜೆ ನಾಯಕರಾದ ಹಬೀಬ್ ಶೇರಾ ಬುಡೋಳಿ, ಹಾಜಿ ಇಸ್ಮಾಯಿಲ್ ಬುಡೋಳಿ, ಎಸ್ ಕೆ ಅಶ್ರಫ್ ಗಡಿಯಾರ್, ಹನೀಫ್ ಸಂಕ, ಯೂಸುಫ್ ಹಾಜಿ, ಎಸ್ ಆರ್ ಸುಲೈಮಾನ್ ಸೂರಿಕುಮೇರು, ಹಸೈನ್ ಸಂಕ, ರಫೀಕ್ ಮದನಿ ಪಾಟ್ರಕೋಡಿ, ಅಬ್ದುಲ್ ಖಾದರ್ ಅರ್ಕ ಕೊಡಿಪ್ಪಾಡಿ ,ಅಶ್ರಫ್ ಸಖಾಫಿ, ಇಬ್ರಾಹಿಂ ಮಾಣಿ, ಅಬ್ದುಲ್ ಕರೀಂ ಸೂರಿಕುಮೇರು, ಹಂಝ ಸೂರಿಕುಮೇರು, ಟೈಲರ್ ಹಸೈನ್ ಸೂರಿಕುಮೇರು,ಇಮ್ರಾನ್ ಸೂರಿಕುಮೇರು, ಅಜ್ಮಲ್ ಮಾಣಿ, ಮುನೀರ್ ಮಾಣಿ, ಅಬ್ಬಾಸ್ ಪಟ್ಲಕೋಡಿ, ಫಾರೂಕ್ ಯೂಸುಫ್ ಸೂರಿಕುಮೇರು, ಹಾಫಿಳ್ ಮುರ್ಶಿದ್ ಸೂರಿಕುಮೇರು, ಮುಂತಾದವರು ಉಪಸ್ಥಿತರಿದ್ದರು, ಸಲೀಂ ಮಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!