- Advertisement -
- Advertisement -




ಮಾಣಿ: SMA ಮತ್ತು SJM ಮಾಣಿ ರೀಜನಲ್ ರೇಂಜ್ ಇದರ ವತಿಯಿಂದ ರೀಜನಲ್ ವ್ಯಾಪ್ತಿಯ ಮದರಸ ಅಧ್ಯಾಪಕರುಗಳಿಗೆ ರಂಝಾನ್ ತಿಂಗಳಿಗೆ ರೇಶನ್ ಕಿಟ್ ವಿತರಣೆ ಕಾರ್ಯಕ್ರಮವು ಪೇರಮೊಗರು ಮದ್ರಸಾ ಹಾಲ್‌ನಲ್ಲಿ ನಡೆಯಿತು.
ಸಯ್ಯಿದ್ ಹಂಝ ಹಾದಿ ತಂಙಲ್ ಪಾಟ್ರಕೋಡಿ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ SMA ಅಧ್ಯಕ್ಷ ಮುಹಮ್ಮದ್ ಪೇರಮೊಗರುರವರ ಅಧ್ಯಕ್ಷತೆಯಲ್ಲಿ ನಡೆಯಿತು. ರೇಂಜ್ ಅಧ್ಯಕ್ಷಯೂನುಸ್ ಸಅದಿ ಕಾರ್ಯಕ್ರಮ ಉದ್ಘಾಟಿಸಿ ರೇಂಜ್ ಕಾರ್ಯದರ್ಶಿ ಲತೀಫ್ ಸಅದಿ ಶೇರಾ ಸ್ವಾಗತಿಸಿದರು. ಬಳಿಕ ತಾಜುಶ್ಯರೀಅ ಉಸ್ತಾದ್ ಮತ್ತು ನೆಕ್ಕಿಲಾಡಿ ಉಸ್ತಾದ್ ಮತ್ತು ಮಸೂದ್ದ್ ಸಖಾಫಿ ಉಸ್ತಾದರ ಹೆಸರಿನಲ್ಲಿ ತಹ್ಲೀಲ್ ಸಮರ್ಪಿಸಿ ದುಆ ನಡೆಸಲಾಯಿತು.
ರೀಜನಲ್ ವ್ಯಾಪ್ತಿಯ 27 ಅಧ್ಯಾಪಕರುಗಳಿಗೆ ರಂಝಾನ್ ತಿಂಗಳ ರೇಶನ್ ಕಿಟ್ಟ್ ವಿತರಿಸಲಾಯಿತು. ಕಾರ್ಯದರ್ಶಿ ಹೈದರ್ ಸಖಾಫಿ ಶೇರಾ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
- Advertisement -