Friday, April 26, 2024
spot_imgspot_img
spot_imgspot_img

ಬಂಟ್ವಾಳ: ಎಮ್.ಎನ್.ಜಿ ಫೌಂಡೇಶನ್ ವತಿಯಿಂದ ನಮಾಝ್ ವಸ್ತ್ರ ಮತ್ತು ಖುರಾನ್ ವಿತರಣೆ

- Advertisement -G L Acharya panikkar
- Advertisement -

ಬಂಟ್ವಾಳ: ಎಮ್ ಎನ್ ಜಿ ಫೌಂಡೇಶನ್ (ರಿ) ಮಂಗಳೂರು ಇದರ ವತಿಯಿಂದ ಇಂದು ಬಂಟ್ವಾಳದಲ್ಲಿ ಸಂಸ್ಥೆಯ ರಮದಾನ್ ತಿಂಗಳ ವಿವಿಧ ಯೋಜನೆಗಳಲ್ಲಿ ಒಂದಾದ ಅರ್ಹ ಕುಟುಂಬಗಳಿಗೆ ಮಹಿಳೆಯರ ನಮಾಝ್ ವಸ್ತ್ರ ಮತ್ತು ಖುರಾನ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿ, ಉದ್ಯಮಿ ಎಮ್.ಎಮ್ ಇಬ್ರಾಹಿಂ ನಂದಾವರ ಅವರು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಂಸ್ಥೆಯ ಸ್ಥಾಪಕರು, ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಸಮಾಜಸೇವಕರಾದ ಇಲ್ಯಾಸ್ ಮಂಗಳೂರು ಅವರು ಮಾತನಾಡಿ ಈ ಯೋಜನೆಯ ಭಾಗವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಯ್ದ ಅರ್ಹ ಹಲವಾರು ಬಡ ಕುಟುಂಬಗಳಿಗೆ ಮಹಿಳೆಯರ ನಮಾಝ್ ವಸ್ತ್ರ ಮತ್ತು ಖುರಾನ್ ತಲುಪಿಸಲಿದ್ದು, ಈ ಹಿಂದೆ ಸಂಸ್ಥೆಯ ವತಿಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಮೀಕ್ಷೆ ನಡೆಸಿ ರಮದಾನ್ ಕಿಟ್ ವಿತರಿಸುವ ಸಂಧರ್ಭದಲ್ಲಿ ಬಹುತೇಕ ಕಡೆ ಮಹಿಳೆಯರ ನಮಾಝ್ ವಸ್ತ್ರ ಮತ್ತು ಖುರಾನ್ ಅವಶ್ಯಕತೆ ಬಗ್ಗೆ ಅರಿವಿಗೆ ಬಂದಿತ್ತು, ಅದರಂತೆ ಈ ಯೋಜನೆಯನ್ನು ರೂಪಿಸಿದ್ದೇವೆ ಹಾಗೂ ಈ ಸಂದರ್ಭದಲ್ಲಿ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆಯೂ ವಿವರಿಸಿದರು.

ಕೋವಿಡ್ ಶಿಷ್ಟಾಚಾರಗಳ ಪಾಲನೆಯೊಂದಿಗೆ ನಡೆದ ಈ ಕಿರು ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿ ಬಶೀರ್ ಪರ್ಲಡ್ಕ ಅವರು ಸ್ವಾಗತಿಸಿದರು ಹಾಗೂ ಕೊನೆಯಲ್ಲಿ ಫಯಾಝ್ ಮಾಡೂರು ಅವರು ಧನ್ಯವಾದಗೈದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಇಸಾಕ್ ತುಂಬೆ, ಇಮ್ತಿಯಾಝ್ ಕೆದುಂಬಾಡಿ, ಮನ್ಸೂರ್ ಬಿ.ಸಿ ರೋಡ್, ಶಿಹಾಬ್ ತಂಙಳ್, ರಫೀಕ್ ಪರ್ಲಿಯಾ, ನವಾಝ್ ಕೋಟೆಕಣಿ, ಶಾಕಿರ್ ಪಾವೂರು, ಮುಖ್ತಾರ್ ಅಕ್ಕರಂಗಡಿ ಹಾಗೂ ಮುದಸ್ಸಿರ್ ಕೆ.ಸಿ ರೋಡ್ ಅವರು ಉಪಸ್ಥಿತರಿದ್ದರು.

- Advertisement -

Related news

error: Content is protected !!