Saturday, June 13, 2026
spot_imgspot_img
spot_imgspot_img

ಮಾಣಿಲ: (ಜು.10) ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿ ಹಬ್ಬ ಮಹೋತ್ಸವದ ಪ್ರಯುಕ್ತ ವಿಟ್ಲ ವಲಯದ ಪೂರ್ವಭಾವಿ ಸಭೆ

- Advertisement -
- Advertisement -

ವಿಟ್ಲ: ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿ ಹಬ್ಬ ಮಹೋತ್ಸವದ ಪ್ರಯುಕ್ತ ಜು.10ರಂದು ಸಂಜೆ 5.30ಕ್ಕೆ ಸರಿಯಾಗಿ ವಿಟ್ಲ ಪಂಚಲಿಂಗೇಶ್ವರ ಸದನದಲ್ಲಿ ವಿಟ್ಲ ವಲಯದ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.

ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನ, ನೇತೃತ್ವದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯನ್ನು ಬಾಲ ಭೋಜನ, ಲಕ್ಷ್ಮೀಪೂಜೆ, ಯಕ್ಷಯಾಗಾದಿ, ಅನ್ನಪ್ರಸಾದ ಸೇವೆಗಳಾದಿ ಸತ್ಕಾರ್ಯದೊಂದಿಗೆ ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಅದರಂತೆ ಈ ವರ್ಷ ಬೆಳ್ಳಿ ಹಬ್ಬದ ಸಂಭ್ರಮದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯು ಜು.16 ರಿಂದ ಜು. 27 ನಡೆಯಲಿದೆ. ಈ ಪ್ರಯುಕ್ತ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವಿಟ್ಲ ಪಂಚಲಿಂಗೇಶ್ವರ ಸದನದಲ್ಲಿ “ಪೂರ್ವಭಾವಿ ಸಭೆ”ಯನ್ನು ಕರೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!