Friday, April 26, 2024
spot_imgspot_img
spot_imgspot_img

ವಿಟ್ಲ: ಅನ್‌ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ವಿಟ್ಲ ಪೇಟೆಯಲ್ಲಿ ಹೆಚ್ಚಿದ ವಾಹನ ದಟ್ಟನೆ

- Advertisement -G L Acharya panikkar
- Advertisement -

ವಿಟ್ಲ: ರಾಜ್ಯದಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪೇಟೆಗಳಲ್ಲಿ ವ್ಯಾಪಾರ ವಹಿವಾಟು ಶುರುವಾಗಿದೆ. ಕಳೆದ ಒಂದೂವರೆ ತಿಂಗಳುಗಳ ಕಾಲ ಸ್ತಬ್ಧವಾಗಿದ್ದ ವಿಟ್ಲ ಪೇಟೆಯಲ್ಲಿ ಜನರ ಓಡಾಟ ಪ್ರಾರಂಭವಾಗಿದೆ.

ಜಿಲ್ಲೆಯಲ್ಲಿ ಅಪರಾಹ್ನ 2 ಗಂಟೆಯವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆಯಲು ಜಿಲ್ಲಾಡಾಳಿತ ಆದೇಶ ಹೊರಡಿಸಿದೆ. ನಿನ್ನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನದ ವರೆಗೆ ಅಗತ್ಯವಸ್ತುಗಳ ಖರೀದಿ, ವ್ಯಾಪಾರ ವಹಿವಾಟುಗಳಿಗೆ ಅನುಮತಿ ಜಾರಿಯಾಗುತ್ತಿದ್ದಂತೆ ವಿಟ್ಲದಲ್ಲೂ ಜನರು ಪೇಟೆಗೆ ಆಗಮಿಸಿದ್ದಾರೆ.

ಎಲ್ಲೆಂದರಲ್ಲಿ ವಾಹನಗಳನ್ನ ಪಾರ್ಕಿಂಗ್ ಮಾಡಿದ ದೃಶ್ಯವೂ ಕಂಡುಬಂದಿದೆ. ವಾಹನಗಳ ಓಡಾಟ ಹೆಚ್ಚುತ್ತಿದ್ದಂತೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ಟ್ರಾಫಿಕ್ ಜಾಮ್‌ನಿಂದ ಕೆಲವು ನಿಮಿಷಗಳ ಕಾಲ ವಾಹನಗಳು ರಸ್ತೆ ನಡುವೆಯಲ್ಲೆ ನಿಂತುಕೊಂಡ ಘಟನೆಯೂ ಕಂಡುಬಂದಿದೆ. ಜನರು ಅಗತ್ಯಕ್ಕಿಂತ ಹೆಚ್ಚಾಗಿ ಓಡಾಡುವ ರೀತಿಯಲ್ಲಿ ವಿಟ್ಲ ಪೇಟೆಯು ಗೋಚರಿಸುತ್ತ ಇದೆ.

ಅನ್‌ಲಾಕ್ ರಿಲೀಫ್ ಸಿಕ್ಕರೂ ಜನರು ಜಾಗೃತೆಯಿಂದ ನಡೆದುಕೊಳ್ಳಬೇಕಾದ ಅನಿವಾರ್ಯತೆ ಸಾಕಷ್ಟಿದೆ. ಮಾಸ್ಟ್ ಧರಿಸಿ, ಕೊರೊನಾ ತಡೆಗಟ್ಟುವ ನಿಯಮಗಳನ್ನು ಪಾಲಿಸಬೇಕಾದ ಕರ್ತವ್ಯವೂ ಇದೆ.

- Advertisement -

Related news

error: Content is protected !!