- Advertisement -
- Advertisement -



ಮಣಿಪಾಲ: ಕಾಲೇಜು ವಿದ್ಯಾರ್ಥಿಯೋರ್ವ ಹಾಸ್ಟೆಲ್ನಿಂದ ನಾಪತ್ತೆಯಾದ ಘಟನೆ ಮಣಿಪಾಲದಲ್ಲಿ ನಡೆದಿದೆ.
ನಾಪತ್ತೆಯಾದ ವಿದ್ಯಾರ್ಥಿಯನ್ನು ರಾಜಸ್ಥಾನದ ನಿವಾಸಿ ಜೀತೇಂದ್ರ ಕುಮಾರ್ ಎಂಬವರ ಮಗ ಸಿದ್ದಾರ್ಥ್ ಕಾರ್ವಾಲ್ (23) ಎಂದು ಗುರುತಿಸಲಾಗಿದೆ.
ಜೀತೇಂದ್ರ ಕುಮಾರ್ ಅವರು ದಿನಾಂಕ 07/07/2025 ರಂದು ಬೆಳಿಗ್ಗೆ 08:00 ಗಂಟೆಗೆ ಮಣಿಪಾಲ MSAP ಹಾಸ್ಟೆಲಿನಲ್ಲಿರುವ ಮಗನನ್ನು ನೋಡಲು ಬಂದಾಗ ಅವರ ಮಗ ಸಿದ್ದಾರ್ಥ ಕಾರ್ವಾಲ್ ಹಾಸ್ಟೆಲಿನ ರೂಮಿನಲ್ಲಿ ಇಲ್ಲದೇ ರೂಮಿನಲ್ಲಿ ಬಟ್ಟೆ ಹಾಗೂ ಮೊಬೈಲ್ ಇದ್ದು ನಂತರ Care Taker Block 10 ಕೌಂಟರಿಗೆ ಹೋಗಿ ವಿಚಾರಿಸಿದ್ದಾರೆ. ಆಗ ಸಿದ್ಧಾರ್ಥ್ ದಿನಾಂಕ 06/07/2025 ರಂದು ರಾತ್ರಿ 10:30 ಗಂಟೆಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಬಳಿಕ ಜೀತೇಂದ್ರ ಕುಮಾರ್ ಮಗ ಹಾಸ್ಟೆಲಿಗೆ ಬಾರದೇ ಮನೆಗೂ ಹೋಗದೇ ಕಾಣೆಯಾದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
- Advertisement -