Tuesday, April 20, 2021
spot_imgspot_img
spot_imgspot_img

ಮಂಜೇಶ್ವರ ಶಾಸಕ ಎಂ ಸಿ ಕಮರುದ್ದೀನ್ ಬಂಧನ

ಮಂಜೇಶ್ವರ(ನ.7): ಫ್ಯಾಶನ್ ಗೋಲ್ಡ್ ಇಂಟರ್ನ್ಯಾಷನಲ್ ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಶಾಸಕ ಎಂ ಸಿ ಕಮರುದ್ದೀನ್ ಅವರನ್ನು ಬಂಧಿಸಲಾಗಿದೆ.

ಪಿ ವಿವೇಕ್ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡ ಶಾಸಕ ಕಮರುದ್ದೀನ್ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದು, ಮೂಲಗಳ ಪ್ರಕಾರ, ತನಿಖಾ ತಂಡಕ್ಕೆ ಪ್ರಮುಖ ಸುಳಿವು ಸಿಕ್ಕಿರುವ ಕಾರಣ, ಶಾಸಕರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಫ್ಯಾಶನ್ ಗೋಲ್ಡ್ ಇಂಟರ್ನ್ಯಾಷನಲ್ ಕಂಪನಿಯ ಹೆಸರಿನಲ್ಲಿ 130 ಕೋಟಿ ರೂ. ಸುಮಾರು 700 ಜನರು ತಮ್ಮ ಹಣವನ್ನು ಈ ಸಂಸ್ಥೆಯಲ್ಲಿ ಠೇವಣಿ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ 109 ಪ್ರಕರಣಗಳು ದಾಖಲಾಗಿವೆ. 15 ಕೋಟಿ ರೂ.ಗಳ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.

- Advertisement -

MOST POPULAR

HOT NEWS

Related news

error: Content is protected !!