ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಕೊಳ್ನಾಡು ಗ್ರಾಮ ಸಮಿತಿ ಮತ್ತು ಮಂಕುಡೆ ಘಟ ಸಮಿತಿಯಿಂದ ಒಡಿಯೂರು ಶ್ರೀಗಳವರ ಜನ್ಮ ದಿನೋತ್ಸವದ ಅಂಗವಾಗಿ ದ.ಕ.ಜಿ.ಪ.ಉ. ಪ್ರಾ.ಶಾಲೆ ಮಂಕುಡೆ ಇಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಅಧ್ಯಕ್ಷರು ಶ್ರೀಧರ ಪೂಂಜ, ಸಂಘಟನಾ ಕಾರ್ಯದರ್ಶಿ ಪರಮೇಶ್ವರ್ ಆಚಾರ್ಯ ಮಂಕುಡೆ, ಹಳೆ ವಿದ್ಯಾರ್ಥಿ ಯುವಕ ಮಂಡಲ ಮಂಕುಡೆ ಇದರ ಅಧ್ಯಕ್ಷರು ಸುರೇಶ್ ಪರ್ತಿಪ್ಪಾಡಿ, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕಲಾ, ಶಾಲಾ ಎಸ್ ಡಿ ಎಂ ಸಿ ಯ ಅಧ್ಯಕ್ಷರು ಗೀತಾ, ಮಂಕುಡೆ ಶಾಲಾ ಶಿಕ್ಷಕರ ವೃಂದ, ಘಟ ಸಮಿತಿಯ ಉಪಾಧ್ಯಕ್ಷರು ಜಗನ್ನಾಥ್ ಶೆಟ್ಟಿ ,ಕಾರ್ಯದರ್ಶಿ ಉಮೇಶ್ ನಾಯ್ಕ, ಜೊತೆ ಕಾರ್ಯದರ್ಶಿ ಪ್ರೇಮ ಎಸ್ ಪೂಂಜ, ಸಂಘಟನಾ ಕಾರ್ಯದರ್ಶಿ ಯೋಗೀಶ್ ಮಂಕುಡೆ ಉಪಸ್ಥಿತರಿದ್ದರು.
ಗ್ರಾಮ ವಿಕಾಸ ಯೋಜನೆಯ ಸಂಯೋಜಕಿ ಮತ್ತು ಸೇವಾ ದೀಕ್ಷಿತೆರಾದ ಶ್ವೇತಾ ಶೆಟ್ಟಿ ಮತ್ತು ವಿಶಾಲಾಕ್ಷಿ, ಹಾಗೂ ಅಡುಗೆ ಸಹಾಯಕರು ಸಹಕರಿಸಿದರು. ವಿಕಾಸ ವಾಹಿನಿಯ ಸುಮಾರು 56 ಸದಸ್ಯರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.