Wednesday, July 22, 2026
spot_imgspot_img
spot_imgspot_img

ವಿಟ್ಲ: ಮಂಕುಡೆ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕರಾದ ಲಕ್ಷ್ಮಣ ದಾಸ್ ನಾಯ್ಕ್ ಸೇವಾ ನಿವೃತ್ತಿ

- Advertisement -
- Advertisement -

ವಿಟ್ಲ: ಮಂಕುಡೆ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಲಕ್ಷ್ಮಣ ದಾಸ್ ನಾಯ್ಕ್ ರವರು ಇಂದು ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.

1988ರಲ್ಲಿ ಇರಾ ಬಾಳೆಪುಣಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಬಳಿಕ ಇರಾ ಪರಪು ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ತಾಳಿತ್ತನೂಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಮಂಕುಡೆ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಈ‌ ಮಧ್ಯೆ ಕೊಳ್ನಾಡು ಗ್ರಾಮದ ಕುಳಾಲು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಲಕ್ಷ್ಮೀ ಕೋಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಯೋಜಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು‌. ಇಷ್ಟು ಮಾತ್ರವಲ್ಲದೆ ಹತ್ತು ವರುಷಗಳಿಂದ ಕೊಳ್ನಾಡು ಗ್ರಾಮದಲ್ಲಿ ಬೂತ್ ಮಟ್ಟದ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ಕಳೆದ 33 ವರ್ಷಗಳಿಂದ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸದ ಅವರು ಮಂಗಳೂರು ತಾಲೂಕಿನ ಶಾಲಾ ನಿವೃತ್ತ ಪರಿವೀಕ್ಷಣಾಧಿಕಾರಿ ಟಿ.ಕೃಷ್ಣ ನಾಯ್ಕ ರವರ ಸಹೋದರರಾಗಿದ್ದಾರೆ.

ಇವರು ಪತ್ನಿ ಬಾಳೆಪುಣಿ ಮುದುಂಗಾರುಕಟ್ಟೆ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾದ ಚಂದ್ರಾವತಿ ಬಿ.ಬಿ. ಹಾಗೂ ಪುತ್ರ ಮಂಗಳೂರು ಶಾರದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ತೇಜಸ್ ಎಲ್. ನಾಯ್ಕ್ ರವರೊಂದಿಗೆ ಕಾಸರಗೋಡು ಜಿಲ್ಲೆಯ‌ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಬಾಳೆಪುಣಿ ಜ್ಞಾನಜ್ಯೋತಿ ನಿಲಯದಲ್ಲಿ ವಾಸವಾಗಿದ್ದಾರೆ‌.

- Advertisement -

Related news

error: Content is protected !!