Friday, March 5, 2021

ಮಂತ್ರಾಲಯ ಮಠದ ಆಸ್ತಿ ಮಾರಾಟಕ್ಕೆ ಮುಂದಾದ ಆಂಧ್ರ ಸರ್ಕಾರ-ಹಿಂದೂಪರ ಸಂಘಟನೆಗಳಿಂದ ವಿರೋಧ !

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಆಸ್ತಿ ಮಾರಾಟಕ್ಕೆ ಆಂಧ್ರ ಸರ್ಕಾರ ಮುಂದಾಗಿದೆ. ಮಂತ್ರಾಲಯದ ಒಟ್ಟು 208 ಎಕರೆ ಇನಾಮು ಭೂಮಿಯನ್ನು ಮಾರಾಟ ಮಾಡಲು ಪ್ರಕಟಣೆ ಹೊರಡಿಸಿದೆ. ಸರ್ಕಾರದ ಈ ಕ್ರಮಕ್ಕೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

ಮಂತ್ರಾಲಯ ಮಠಕ್ಕೆ ಸಂಬಂಧಿಸಿದ ವಡ್ಡೆಪಲ್ಲೆ, ಮಲದಕಲ್, ಧರೂರು ಮಂಡಲ ವ್ಯಾಪ್ತಿಯಲ್ಲಿ ಭೂಮಿ ಒತ್ತುವರಿಯಾಗಿದೆ ಎಂಬ ಕಾರಣಕ್ಕೆ ಮಾರಾಟ ಮಾಡಲು ಮಠವೇ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದರಿಂದ ಬಂದ ಹಣವನ್ನು ಕಾರ್ಪೋರೆಟ್ ಫಂಡ್ ಆಗಿ ಉಳಿಸಿಕೊಳ್ಳಲು ಮಠ ತೀರ್ಮಾನಿಸಿದೆ. ಈಗ ಆಂಧ್ರ ಸರ್ಕಾರದ ಕ್ರಮ ವಿವಾದಕ್ಕೀಡಾಗಿದೆ.

- Advertisement -

MOST POPULAR

HOT NEWS

Related news

error: Content is protected !!