Monday, April 29, 2024
spot_imgspot_img
spot_imgspot_img

ಮದುವೆಗೆ ಹೊಸ ಗೈಡ್ ಲೈನ್ಸ್ ಬಿಡುಗಡೆ: ಕೇವಲ 40 ಜನರಿಗೆ ಮಾತ್ರ ಅವಕಾಶ

- Advertisement -G L Acharya panikkar
- Advertisement -

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರೆ, ಇತ್ತ ಸರ್ಕಾರ ಕೂಡ ದಿನಕ್ಕೊಂದು ಆದೇಶ ಹೊರಡಿಸುವ ಮೂಲಕ ಜನರಲ್ಲಿ ಆತಂಕದ ಜೊತೆಗೆ ಗೊಂದಲಕ್ಕೀಡು ಮಾಡುತ್ತಿದೆ.

ಈಗಾಗಲೇ ಸೋಮವಾರದಿಂದ 14 ದಿನಗಳ ಕಾಲ ಲಾಕ್ ಡೌನ್ ಎಂದು ಘೋಷಿಸಿರುವ ಸರ್ಕಾರ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಿತ್ತು. ಆದರೆ ಇದೀಗ ಈ ಮಾರ್ಗಸೂಚಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ಸರ್ಕಾರ ಮತ್ತೆ ಪರಿಷ್ಕೃತ ಆದೇಶ ಹೊರಡಿಸಿದೆ.

ಈ ಹಿಂದೆ ಮದುವೆಗೆ 50 ಜನರಿಗೆ ಅವಕಾಶ ನೀಡಿದ್ದ ಸರ್ಕಾರ, ಈ ಬಾರಿ ಅದರ ಮಿತಿಯನ್ನು ಇಳಿಕೆ ಮಾಡಿದೆ. ಕೇವಲ 40 ಜನರಿಗಷ್ಟೇ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ.

ಮದುವೆಗಳನ್ನು ಕಲ್ಯಾಣ ಮಂಟಪದಲ್ಲಿ ನೆರವೇರಿಸಲು ಅವಕಾಶ ಇಲ್ಲ. ಹೀಗಾಗಿ ಈಗಾಗಲೇ ನಿಗದಿಯಾಗಿರುವ ಮದುವೆಗಳನ್ನು ತಮ್ಮ ತಮ್ಮ ಮನೆಗಳಲ್ಲೇ ಮಾಡಿ ಮುಗಿಸಬೇಕು. ಈ ಹಿಂದೆ ಇದ್ದಂತಹ ನಿಯಮದಂತೆ ಮದುವೆಯಲ್ಲಿ ಭಾಗವಹಿಸುವವರಿಗೆ ಸ್ಥಳೀಯಾಡಳಿತಗಳಿಂದ ಪಾಸ್ ವಿತರಿಸಬೇಕು.

ಪರಿಷ್ಕೃತ ಆದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಹಾಗೂ ಸಿಮೆಂಟ್ ಗೆ ಬಳಸುವ ಲೈಮ್ ಸ್ಟೋನ್ ತಯಾರಿಕೆಗೆ ಅನುಮತಿ ನೀಡಲಾಗಿದೆ. ಇನ್ನುಳಿದಂತೆ ಹಳೆಯ ಆದೇಶಗಳೇ ಮುಂದುವರಿಯಲಿದೆ.

driving
- Advertisement -

Related news

error: Content is protected !!