Sunday, May 19, 2024
spot_imgspot_img
spot_imgspot_img

ಕುಂದಾಪುರ: ಶಾರ್ಟ್ ಸರ್ಕ್ಯೂಟ್ ನಿಂದ ಭಾರಿ ದುರಂತ :ಎರಡು ಅಂಗಡಿಗಳು ಸುಟ್ಟು ಕರಕಲು

- Advertisement -G L Acharya panikkar
- Advertisement -
This image has an empty alt attribute; its file name is shri-energy-solar-667x1024.jpeg
This image has an empty alt attribute; its file name is VC_PUC_-1-819x1024.jpg

ಕುಂದಾಪುರ: ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿ ಎರಡು ಅಂಗಡಿಗಳು ಸುಟ್ಟು ಕರಕಲಾದ ಘಟನೆ ಕುಂದಾಪುರದ ಸಿದ್ದಾಪುರದಲ್ಲಿ ಸೋಮವಾರ ನಡೆದಿದೆ.

ಅಗ್ನಿ ಅವಘಡದಿಂದ ಮಿಲ್ಕ್ ಪಾರ್ಲರ್ ಹಾಗೂ ಅದೇ ಕಟ್ಟಡದಲ್ಲಿದ್ದ ಸ್ಪೇರ್ ಪಾರ್ಟ್ಸ್ ಅಂಗಡಿ ಸುಟ್ಟು ಕರಕಲಾಗಿದೆ, ಜೊತೆಗೆ ಸ್ಪೇರ್ ಪಾರ್ಟ್ಸ್ ಅಂಗಡಿಯಲ್ಲಿದ್ದ ಬಿಡಿಭಾಗಗಳು, ಟಯರ್, ಆಯಿಲ್ ಡಬ್ಬಗಳು ಸೇರಿ ಹಲವು ವಸ್ತುಗಳ ಸುಟ್ಟುಹೋಗಿದೆ.

ಮಿಲ್ಕ್ ಪಾರ್ಲರ್ ನಲ್ಲಿದ್ದ ಉತ್ಪನ್ನಗಳು ಫ್ರಿಡ್ಜ್‌ ಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅಗ್ನಿ ಅವಘಡ ಸಂಭವಿಸಿದ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು, ಆದರೆ ಬೆಂಕಿಯು ಹತೋಟಿಗೆ ಬಾರದ ಹಿನ್ನೆಲೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಯಶಸ್ವಿಯಾಗಿ ಬೆಂಕಿ ನಂದಿಸಲಾಯಿತು.

- Advertisement -

Related news

error: Content is protected !!