Tuesday, April 30, 2024
spot_imgspot_img
spot_imgspot_img

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯದಲ್ಲಿ ತಾರತಮ್ಯ; ಗುಮಾಸ್ತರಾಗಿ ದುಡಿಯುತ್ತಿರುವ ಯುವಕನಿಗೆ ಸಂಬಳ ನೀಡದೆ ಸತಾಯಿಸುತ್ತಿರುವ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ- ಕುಮ್ಮಕ್ಕು ನೀಡುತ್ತಿರುವ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯದಲ್ಲಿ ಭಾರೀ ತಾರತಮ್ಯ ನಡೆಯುತ್ತಿದ್ದು, 15 ವರ್ಷದಿಂದ ಇಲ್ಲಿ ಗುಮಾಸ್ತನಾಗಿ ದುಡಿಯುತ್ತಿರುವ ಪ್ರವೀಣ್ ಕುಮಾರ್ ಎಂಬ ಯುವಕನಿಗೆ ಕಳೆದ 2 ವರ್ಷದಿಂದ ಪೂರ್ತಿ ಸಂಬಳ ಹಣ ನೀಡದೆ ಕೇವಲ ಅರ್ಧ ಸಂಬಳ ನೀಡಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಲತಾ ಮತ್ತು ದೇವಸ್ಥಾನ ಆಡಳಿತ ಮಂಡಳಿ ಸತಾಯಿಸುತ್ತಿದೆ. ಈ ಬಗ್ಗೆ ಹಲವು ಬಾರಿ ದೇವಸ್ಥಾನ ಆಡಳಿತ ಮಂಡಳಿಗೆ ತಿಳಿಸಿ ದೂರು ಕೊಟ್ಟರು ಯಾವುದೇ ರೀತಿಯ ನ್ಯಾಯ ದೊರೆತಿಲ್ಲ ವೆಂದು ಪ್ರವೀಣ್ ಬೇಸರ ವ್ಯಕ್ತ ಪಡಿಸಿ ಈಗ ತಮಗಾದ ಅನ್ಯಾಯದ ಬಗ್ಗೆ ಆಡಳಿತ ಮಂಡಳಿಯ ವಿರುದ್ಧ ಪ್ರವೀಣ್ ಎಂಬವರು ಕುಕ್ಕೆ ಸುಬ್ರಮಣ್ಯ ಪೊಲೀಸ್ ಠಾಣೆ ಗೆ ದೂರನ್ನು ನೀಡಿದ್ದಾರೆ

ಸುಮಾರು ವರ್ಷಗಳ ಹಿಂದೆ ದೇವಸ್ಥಾನದ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣ್ ಕುಮಾರ್ ಹಾಗೂ ರಾಜೇಶ್ ರೈ ತನ್ನ ಸಹಿಯನ್ನು ಪೋರ್ಜರಿ ಮಾಡಿದ್ದಾರೆಂದು ಆರೋಪಿಸಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಲತಾರವರು ಆಡಳಿತ ಮಂಡಳಿಗೆ ದೂರು ನೀಡಿದರು. ಈ ಪ್ರಕರಣವನ್ನು ಆಡಳಿತ ಮಂಡಳಿಯವರು ಹಿಂದೂ ಧಾರ್ಮಿಕ ಇಲಾಖೆಯ ಆಯುಕ್ತರಿಗೆ ವಹಿಸಿತ್ತು.

ಕಾನೂನು ಪ್ರಕಾರ ತನಿಖೆ ನಡೆಸಿದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಇದೊಂದು ಸುಳ್ಳು ಅಪವಾದ ಪ್ರವೀಣ್ ಕುಮಾರ್ ಮತ್ತು ರಾಜೇಶ್ ರೈ ನಿರಪರಾಧಿ ಎಂದು ಸಾಬೀತು ಪಡಿಸಿ ವರದಿಯನ್ನು ಸಲ್ಲಿಸಿದರು.

ಆದರೆ ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಲತಾ ಪ್ರವೀಣ್ ಕುಮಾರ್‌ಗೆ ದಲಿತ ವ್ಯಕ್ತಿಯೆಂದು ಜಾತಿನಿಂದನೆ ಮಾಡುತ್ತಾ, ತೇಜೋವಧೆ ಮಾಡುತ್ತಿದ್ದಾರೆ. ಇದಕ್ಕೆ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಕುಮ್ಮಕ್ಕು ನೀಡುತ್ತಿದ್ದು, “ನಿನಗೆ ಕೆಲಸ ಯಾಕೆ ಮಾರಾಯ ಹೋಗಿ ಸೌತೆಕಾಯಿ ಮಾರು” ಎಂದು ಹೀಯಾಳಿಸಿ, ಜೀವ ಬೆದರಿಕೆಯನ್ನು ಹಾಕುತ್ತಿದ್ದಾರೆ. ಅದಲ್ಲದೆ ಪದೇ ಪದೇ ವಿನಾಕಾರಣ ಸುಳ್ಳು ಅಪವಾದ ಹೊರಿಸಿ, ಸಂಬಳ ನೀಡದೆ , ಗುಮಾಸ್ತನಾಗಿದ್ರೂ ಸ್ವಚ್ಛತಾ ಕೆಲಸ ಇನ್ನಿತರ ಕೆಳ ದರ್ಜೆಯ ಕೆಲಸಗಳನ್ನು ಈತನಿಂದ ಉದ್ದೇಶ ಪೂರ್ವಕವಾಗಿ ಮಾಡಿಸಿ ದಲಿತ ವಿರೋಧಿ ನೀತಿಯನ್ನು ಸುಬ್ರಮಣ್ಯ ದೇವಸ್ಥಾನ ಮಂಡಳಿ ಅನುಸರಿಸುತ್ತಿದ್ದಾರೆ ಎಂದು ಪ್ರವೀಣ್‌ ಆರೋಪಿಸಿದ್ದಾರೆ.

ಆಡಳಿತ ಮಂಡಳಿಯವರು ಮೇ.20ರಂದು ಸಭೆ ನಡೆಸುತ್ತಿದ್ದಾಗ ದಲಿತ ಸಂಘಟನಾ ಸಮಿತಿಯವರು ಪ್ರವೇಶಿಸಿ ಆಡಳಿತ ಮಂಡಳಿಯ ಸದಸ್ಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಅಧ್ಯಕ್ಷರು ನೀವು ದೂರನ್ನು ನೀಡಿ ಎಂದು ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ.

ಬಹಳ ಬಡತನದ ಪರಿಸ್ಥಿತಿ ಇರುವ ಪ್ರವೀಣ್ ಮನೆಯಲ್ಲಿ ಒಬ್ಬರೇ ದುಡಿದು ಸಂಸಾರ ನಿಭಾಯಿಸುವ ಸ್ಥಿತಿ 2 ತಿಂಗಳ ಮಗು ಸಹ ಇದೆ ಇತ್ತ ಸಂಬಳ ಸಹ ಇಲ್ಲ. ಸರ್ಕಾರ ಖಾಯಂ ಉದ್ಯೋಗಿಯೆಂದು ಲೆಟರ್ ಕೊಟ್ಟರು ಸಹ ಆಡಳಿತ ಮಂಡಳಿ ಪ್ರವೀಣ್ ಗೆ ಆ ಲೆಟರ್ ಕೊಟ್ಟಿಲ್ಲ ಹೀಗಾಗಿ ನನಗೆ ನ್ಯಾಯ ದೊರೆಯಬೇಕು.ಇಲ್ಲದಿದ್ದಾರೆ ಉಗ್ರ ಪ್ರತಿಭಟನೆ ಮಾಡುತ್ತೇನೆಂದು ಸಂತ್ರಸ್ತ ಪ್ರವೀಣ್ ಹೇಳಿದ್ದಾರೆ

- Advertisement -

Related news

error: Content is protected !!