Wednesday, July 22, 2026
spot_imgspot_img
spot_imgspot_img

ಅಮೃತಸರ, ಜಲಂಧರ್‌ನಲ್ಲಿರೋ ಬಿಎಸ್‌ಎಫ್ ಪ್ರಧಾನ ಕಚೇರಿ ಬಳಿ ಭಾರೀ ಸ್ಫೋಟ

- Advertisement -
- Advertisement -

ಚಂಡೀಗಢ: ಅಮೃತಸರ ಕಂಟೋನ್ಮೆಂಟ್ ಹಾಗೂ ಜಲಂಧರ್‌ನಲ್ಲಿರುವ ಗಡಿ ಭದ್ರತಾ ಪಡೆ ಪ್ರಧಾನ ಕಚೇರಿಯ ಬಳಿ ಭಾರೀ ಸ್ಫೋಟಗಳು ಸಂಭವಿಸಿವೆ.

ಮಂಗಳವಾರ ರಾತ್ರಿ 10:50 ರ ಸುಮಾರಿಗೆ ಅಮೃತಸರದ ಖಾಸ್ಸಾ ಕಂಟೋನ್ಮೆಂಟ್ ಮತ್ತು ಜಲಂಧರ್‌ನಲ್ಲಿರುವ ಗಡಿ ಭದ್ರತಾ ಪಡೆ ಪ್ರಧಾನ ಕಚೇರಿಯ ಹೊರಗೆ ಸ್ಫೋಟಗಳು ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಜಲರಂಧರ್‌ನಲ್ಲಿ ಸ್ಕೂಟರ್ ಬೆಂಕಿಗೆ ಆಹುತಿಯಾದ ಕಾರಣ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ಪೊಲೀಸರು ಆರಂಭದಲ್ಲಿ ಹೇಳಿದ್ದರು. ಬಳಿಕ ಎರಡೂ ಕಡೆ ಉಂಟಾದ ಸ್ಫೋಟಗಳಲ್ಲಿ IED (ಸುಧಾರಿತ ಸ್ಫೋಟಕ ಸಾಧನ) ಬಳಕೆ ಮಾಡಿರುವುದು ಕಂಡುಬಂದಿದೆ.

ಈ ಕುರಿತು ಎಸ್ಪಿ ಆದಿತ್ಯ ಎಸ್. ವಾರಿಯರ್ ಮಾತನಾಡಿ, ಶಂಕಿತ ಸ್ಫೋಟದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಹಿರಿಯ ಅಧಿಕಾರಿಗಳು ಕಂಟೋನ್ಮೆಂಟ್ ಪ್ರದೇಶದಲ್ಲಿ ಬೀಡುಬಿಟ್ಟಿರುವ ಸೇನಾ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ವಿಧಿವಿಜ್ಞಾನ ಪ್ರಯೋಗಾಲಯ ತಂಡ ಸ್ಥಳಕ್ಕೆ ಧಾವಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ.

ಮೊದಲಿಗೆ ರಾತ್ರಿ 10:50 ರ ಸುಮಾರಿಗೆ ಅಮೃತ್‌ಸರದ ಖಾಸ್ಸಾ ಕಂಟೋನ್ಮೆಂಟ್ ಬಳಿ ಸ್ಫೋಟದ ಶಬ್ಧ ಕೇಳಿಬಂದಿರುವುದಾಗಿ ಪೊಲೀಸರಿಗೆ ದೂರು ಬಂದಿತು. ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಸೇನಾ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತಲುಪಿದ್ರು. ಎಫ್‌ಎಸ್‌ಎಲ್ ಸಂಗ್ರಹಿಸಿರುವ ಸಾಕ್ಷ್ಯಗಳನ್ನ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಫೋಟಕ ಹೇಗೆ ಸಂಭವಿಸಿತು? ಮತ್ತು ಇದಕ್ಕೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!