Saturday, July 25, 2026
spot_imgspot_img
spot_imgspot_img

ಮಂಗಳೂರು: ನವಗ್ರಾಮ ಗುಡ್ಡ ಪ್ರದೇಶದಲ್ಲಿ MDMA ಮಾರಾಟ-ಯುವಕನ ಬಂಧನ

- Advertisement -
- Advertisement -


ಮಂಗಳೂರು: ನಿಷೇಧಿತ ಮಾದಕ ವಸ್ತು MDMA ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕೊಣಾಜೆ ಪೊಲೀಸರು ಯುವಕನೊಬ್ಬನನ್ನು ಬಂಧಿಸಿರುವ ಘಟನೆ ಉಳ್ಳಾಲ ತಾಲೂಕಿನ ಬಾಳೆಪುಣಿ ಗ್ರಾಮದಲ್ಲಿ ನಡೆದಿದೆ.

ಫೆ. 7ರಂದು ಖಚಿತ ಮಾಹಿತಿಯ ಮೇರೆಗೆ ಕೊಣಾಜೆ ಪೊಲೀಸ್ ಠಾಣೆಯ ನಿರೀಕ್ಷಕರು, ಉಪನಿರೀಕ್ಷಕರು, ಸಿಬ್ಬಂದಿಗಳು ಹಾಗೂ ಮಂಗಳೂರು ದಕ್ಷಿಣ ಉಪವಿಭಾಗದ ಆಂಟಿ–ಡ್ರಗ್ ತಂಡದ ಸಿಬ್ಬಂದಿಗಳು ಸೇರಿ ಬಾಳೆಪುಣಿ ಗ್ರಾಮದ ನವಗ್ರಾಮ ಸೈಟ್ ನಾರ್ಯಗುತ್ತು ಗುಡ್ಡ ಪ್ರದೇಶದಲ್ಲಿ ದಾಳಿ ನಡೆಸಿ ಜೋರ್ಡನ್ (21) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಯು ಉಳ್ಳಾಲ ತಾಲೂಕಿನ ಬಾಳೆಪುಣಿ ಗ್ರಾಮದ ಕುಕ್ಕದ ಕಟ್ಟೆ ಸೈಟ್‌ನಲ್ಲಿ ಸೆಫಿಯಾ ಎಂಬವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಆತನಿಂದ 55 ಗ್ರಾಂ MDMA ಮಾದಕ ವಸ್ತು, ಒಂದು ಮೊಬೈಲ್ ಫೋನ್ ಹಾಗೂ ಡಿಜಿಟಲ್ ತೂಕದ ಮಾಪನ ಯಂತ್ರ ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.


ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 14/2026 ರಂತೆ ಪ್ರಕರಣ ದಾಖಲಿಸಲಾಗಿದ್ದು, NDPS ಕಾಯ್ದೆಯ ಕಲಂ 8(ಸಿ), 22(ಎ), 22(ಬಿ), 22(ಸಿ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

- Advertisement -

Related news

error: Content is protected !!