Sunday, May 5, 2024
spot_imgspot_img
spot_imgspot_img

ಸುಳ್ಯ: ಎಂಡಿಎಂಎ ಮಾದಕವಸ್ತು ಕಳ್ಳ ಸಾಗಾಣೆ : ಸುಳ್ಯ ಮೂಲದ ಇಬ್ಬರು ಕೇರಳ ಪೋಲಿಸ್‌ ವಶ

- Advertisement -G L Acharya panikkar
- Advertisement -
This image has an empty alt attribute; its file name is VC_PUC_-1-819x1024.jpg
This image has an empty alt attribute; its file name is creative2-1024x1024.jpeg

ಸುಳ್ಯ: ಎಂಡಿಎಂಎಯನ್ನು ಕಳ್ಳ ಸಾಗಾಟಕ್ಕೆ ಯತ್ನಿಸಿದ ಸುಳ್ಯದ ಇಬ್ಬರು ಯುವಕರನ್ನು ಕೇರಳ ಅಬಕಾರಿ ಪೋಲಿಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ಸುಳ್ಯದ ಅಲೆಟ್ಟಿ ಗ್ರಾಮದ ನಿವಾಸಿಗಳಾದ ಉಮ್ಮರ್ ಫಾರೂಕ್ ಮತ್ತು ಎ.ಎಚ್. ಸಿದ್ದಿಕ್‌ ಎಂದು ಗುರುತಿಸಲಾಗಿದೆ.

ಆರೋಪಿಗಳು ಬೆಂಗಳೂರಿನಿಂದ 1.5 ಲಕ್ಷ ರೂ.ಗೆ ಖರೀದಿಸಿದ್ದ ಎಂಡಿಎಂಎಯನ್ನು ಮಲಪ್ಪುರಂಗೆ ತೆಗೆದುಕೊಂಡು ಹೋಗುತ್ತಿರುವ ವೇಳೆ ಮಾನಂದವಾಡಿ ಅಬಕಾರಿ ವೃತ್ತ ನಿರೀಕ್ಷಕ ಎ.ಪ್ರಜಿತ್ ನೇತೃತ್ವದ ತಂಡ ಕೇರಳದ ಮಾನಂದವಾಡಿಯಲ್ಲಿನ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಪತ್ತೆಯಾಗಿದೆ.

ಆರೋಪಿಗಳು ಬೆಂಗಳೂರಿನಿಂದ ಖರೀದಿಸಿದ್ದ ಎಂಡಿಎಂಎಯನ್ನು ಮಲಪ್ಪುರಂಗೆ ತಲುಪಿಸುವ ಗುರಿ ಹೊಂದಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಎಂಡಿಎಂಎಯನ್ನು ಪ್ರತಿ ಗ್ರಾಂಗೆ 4 ಸಾವಿರ ರೂ.ಗೆ ಮಾರಾಟ ಮಾಡಲು ಕಳ್ಳಸಾಗಣೆ ಮಾಡಲಾಗಿತ್ತು. ಆರೋಪಿಗಳು ಎಂಡಿಎಂಎ ಕಳ್ಳಸಾಗಣೆ ಮಾಡಲು ಬಳಸಿದ ಕಾರನ್ನು ಅಬಕಾರಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!