Sunday, May 5, 2024
spot_imgspot_img
spot_imgspot_img

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಕಾಲಾವಧಿ ಜಾತ್ರೆಯ ಪ್ರಯುಕ್ತ ಗೊನೆ ಮುಹೂರ್ತ

- Advertisement -G L Acharya panikkar
- Advertisement -

ಜ.14 ರಿಂದ ಜ .21 ರವರೆಗೆ ವರ್ಷಾವಧಿ ಜಾತ್ರೋತ್ಸವ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ಜ.14 ರಿಂದ ಜ .21 ರವರೆಗೆ ನಡೆಯಲಿದ್ದು ಇದರ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಜ.3 ರಂದು ನಡೆಯಿತು.

ಜಾತ್ರೊತ್ಸವವು 14-01-2023 ನೇ ಶನಿವಾರದಂದು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿ ಒಂಭತ್ತು ದಿವಸಗಳ ತನಕ ಉತ್ಸವಾದಿಗಳೊಂದಿಗೆ ಜರಗಲಿರುವುದು.

ದಿನಾಂಕ 14-01-2023 ನೇ ಶನಿವಾರ ಲಕ್ಷದೀಪೋತ್ಸವ, ಬೆಳಿಗ್ಗೆ ಗಂಟೆ 10ಕ್ಕೆ ಧ್ವಜಾರೋಹಣ, ರಾತ್ರಿ ಗಂಟೆ 8.30ಕ್ಕೆ ಉತ್ಸವ ಬಲಿ, ಕಟ್ಟೆ ಪೂಜೆಯ ಬಳಿಕ ಬಟ್ಟಲು ಕಾಣಿಕೆ, (ಸಂಜೆ 6.00 ಗಂಟೆಗೆ ಅರಸು ಮುಂಡಾಲ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನ). ದಿನಾಂಕ 15-01-2023ನೇ ರವಿವಾರ ಸಂಜೆ ಗಂಟೆ 7ಕ್ಕೆ ನಿತ್ಯೋತ್ಸವ. ದಿನಾಂಕ 16-01-2023ನೇ ಸೋಮವಾರ ಸಂಜೆ ಗಂಟೆ 7ಕ್ಕೆ ನಿತ್ಯೋತ್ಸವ. ದಿನಾಂಕ 17-01-2023ನೇ ಮಂಗಳವಾರ ಸಂಜೆ ಗಂಟೆ 7ಕ್ಕೆ ನಿತ್ಯೋತ್ಸವ.

ದಿನಾಂಕ 18-01-2023ನೇ ಬುಧವಾರ ಬಯ್ಯದ ಬಲಿ ಉತ್ಸವ, ರಾತ್ರಿ ಗಂಟೆ 8.30ಕ್ಕೆ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಬರುವುದು, ರಾತ್ರಿ ಗಂಟೆ 9ಕ್ಕೆ ಬಯ್ಯದ ಬಲಿ ಉತ್ಸವ ಪ್ರಾರಂಭ, ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಗಂಟೆ 9 ರುದ್ರಯಾಗ ನಡೆಯಲಿರುವುದು. ದಿನಾಂಕ 19-01-2023ನೇ ಗುರುವಾರ ನಡು ದೀಪೋತ್ಸವ-ಕೆರೆ ಆಯನ, ಬೆಳಿಗ್ಗೆ ಗಂಟೆ 9.30ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ ಗಂಟೆ 8ಕ್ಕೆ ಉತ್ಸವದ ನಂತರ ತೆಪ್ಪೋತ್ಸವ ನಡೆಯಲಿದೆ.

ದಿನಾಂಕ 20-01-2023ನೇ ಶುಕ್ರವಾರ ಹೂತೇರು, ಪ್ರಾತಃಕಾಲ ಗಂಟೆ 5ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ ಗಂಟೆ 7.30ಕ್ಕೆ ಉತ್ಸವದ ನಂತರ ಹೂತೇರು. ದಿನಾಂಕ 21-01-2023ನೇ ಶನಿವಾರ “ಮಹಾರಥೋತ್ಸವ” ಬೆಳಿಗ್ಗೆ ಗಂಟೆ 9.30ಕ್ಕೆ ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ, ಆಗಮನ, ರಾತ್ರಿ ಗಂಟೆ 9 ಕ್ಕೆ ಮಹಾ ರಥೋತ್ಸವ, ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ. ದಿನಾಂಕ 22-01-2023ನೇ ರವಿವಾರ ಬೆಳಿಗ್ಗೆ ಗಂಟೆ 8.30ಕ್ಕೆ ಕವಟೋದ್ಘಾಟನೆ, ಮಹಾಪೂಜೆ, ಕಾಲಾವಧಿ ಬಟ್ಲು ಕಾಣಿಕೆ, ತುಲಾಭಾರ ಸೇವೆ, ರಾತ್ರಿ ಗಂಟೆ 7.30ಕ್ಕೆ ಓಕುಳಿಕಟ್ಟೆಯಲ್ಲಿ ಕಟ್ಟೆಪೂಜೆಯ ನಂತರ ಶ್ರೀ ದೇವರಿಗೆ ಅಷ್ಟಾವಧಾನ ಸೇವೆ, ನಂತರ ಅವಭೃತ ಸ್ನಾನಕ್ಕೆ ಕೊಡಂಗಾಯಿಗೆ ಸವಾರಿ, ಧ್ವಜಾವರೋಹಣ, ಸಂಪ್ರೋಕ್ಷಣೆ.

ದಿನಾಂಕ 24-01-2023ನೇ ಮಂಗಳವಾರ ಮಧ್ಯಾಹ್ನ ಗಂಟೆ 2ಕ್ಕೆ ಅರಸು ಮುಂಡಾಲತ್ತಾಯ, ಮಲರಾಯ ದೈವ ಕೊಡಮಣಿತ್ತಾಯ, ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ. ದಿನಾಂಕ 25-01-2023ನೇ ಬುಧವಾರ ಮಧ್ಯಾಹ್ನ ಗಂಟೆ 2 ಕ್ಕೆ ಅರಮನೆಯಲ್ಲಿ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ಬಳಿಕ ಕೇಪುವಿಗೆ ಭಂಡಾರ ಹೊರಡುವುದು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!