Monday, June 30, 2025
spot_imgspot_img
spot_imgspot_img

ಉಳ್ಳಾಲ: ಮಾದಕ ವಸ್ತು ಎಂಡಿಎಂಎ ಸಾಗಾಟ; ಆರೋಪಿ ಅರೆಸ್ಟ್…!

- Advertisement -
- Advertisement -

ಉಳ್ಳಾಲ: ಮಾದಕ ವಸ್ತು ಎಂಡಿಎಂಎ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಯುವಕನನ್ನು ಮಂಗಳೂರು ಆ್ಯಂಟಿ ಡ್ರಗ್‌ ಟೀಮ್‌ನ ತಂಡ ಬಂಧಿಸಿದೆ.

ಬಂಧಿತ ಆರೋಪಿಯನ್ನು ಕೋಟೆಕಾರು ಕೆ.ಸಿ. ರೋಡ್‌ ನಿವಾಸಿ ಆಸೀಫ್‌ (27)ಎಂದು ಗುರುತಿಸಲಾಗಿದೆ. ಆರೋಪಿಯಿಂದ 4.41 ಗ್ರಾಂ ಎಂಡಿಎಂಎ ಸಹಿತ ಸಾಗಾಟಕ್ಕೆ ಬಳಸಿದ್ದ ಬೈಕ್‌ ಹಾಗೂ ಸುಮಾರು 68 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೋಟೆಕಾರ್‌ ಗ್ರಾಮದ ಕೆ.ಸಿ. ನಗರ ಯು.ಜಿ. ಗೇಟ್‌ರೋಡ್‌ನ‌ ಸಾರ್ವಜನಿಕ ರಸ್ತೆ ಬದಿಯ ಖಾಲಿ ಜಾಗದ ಬಳಿಗೆ ದಾಳಿ ನಡೆಸಿ ಈತನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!