Saturday, April 20, 2024
spot_imgspot_img
spot_imgspot_img

ಯಂತ್ರದ ಮೂಲಕ ಚಾಪೆ ನೇಜಿ ನಾಟಿ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ವಲಯದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುಂಡಡ್ಕ ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಿಟ್ಲಮುಡ್ನೂರು ಹಾಗೂ ಕುಳ ಒಕ್ಕೂಟ ಇದರ ಸಂಯುಕ್ತಾಶ್ರಯದಲ್ಲಿ ಕುಂಡಡ್ಕ ಮಾಗಣೆ ಮನೆಯ ಕಂಬಳಗದ್ದೆಯಲ್ಲಿ ಯಂತ್ರದ ಮೂಲಕ ಚಾಪೆ ನೇಜಿ ನಾಟಿ ಕಾರ್ಯಕ್ರಮ ಮಾಹಿತಿ ಮತ್ತು ತರಬೇತಿಯೊಂದಿಗೆ ನಡೆಯಿತು.


ಸಭಾ ಅಧ್ಯಕ್ಷತೆಯನ್ನು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಿಟ್ಲ ವಲಯಾಧ್ಯಕ್ಷರಾದ ಜನಾರ್ಧನ ಪದ್ಮಶಾಲಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಶೆಟ್ಟಿಯವರು ಮಾತಾನಾಡಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಇಂತಹ ಕಾರ್ಯಕ್ರಮಗಳು ಮಾದರಿ ಇದಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು. ಸಿ.ಎಚ್.ಎಸ್.ಸಿ ಕೃಷಿ ಯಂತ್ರಧಾರೆ ಉಡುಪಿ ವಿಭಾಗದ ಸಮನ್ವಯಾಧಿಕಾರಿಯಾದ ಅಶೋಕ್‍ರವರು ಚಾಪೆ ನೇಜಿ ತಯಾರಿ, ನೇಜಿ ನಾಟಿ ಮಾಡುವ ವಿಧಾನವನ್ನು ಸವಿಸ್ತರವಾಗಿ ತಿಳಿಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕಿನ ಯೋಜನಾಧಿಕಾರಿ ಶ್ರೀ ಮೋಹನ್, ಕೃಷಿ ಮೇಲ್ವಿಚಾರಕರಾದ ಶ್ರೀ ನಂದಿತಾ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ವಿಟ್ಲಮೂಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಾಕ್ಷರಾದ ದಯಾನಂದ ಅಬೀರಿ, ಹಿರಿಯರಾದ ಬಾಬು ಆಳ್ವ, ಶ್ರೀ ವಿಷ್ಣು ಮೂರ್ತಿ ಯುವಕ ವೃಂದದ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಕುಂಡಡ್ಕ ಮಾಗಣೆ ಮನೆಯ ಪ್ರತಿನಿಧಿ ನಾರಾಯಣ್, ಒಕ್ಕೂಟದ ಅಧ್ಯಕ್ಷರಾದ ಸಂಜೀವ ಪೂಜಾರಿ ಹಾಗೂ ದಯಾನಂದ, ಯಂ.ಸಿ.ಯಂ ನೆಟ್ ಸಂಘದ ಲೋಹಿತ್ ಜೀ.ಎಸ್, ಸೇವಾಪ್ರತಿನಿಧಿಗಳಾದ ಶ್ರೀಮತಿ ಯೋಗಿತಾ, ಯಶೋಧ ರವರು ಉಪಸ್ಥಿತರಿದ್ದರು.

ವಲಯದ ಮೇಲ್ವಿಚಾರಕರಾದ ರಮೇಶ್ ಎಸ್ ಕಾರ್ಯಕ್ರಮ ನಿರೂಪಿಸಿ, ಹರೀಶ್‍ರವರು ಸ್ವಾಗತಿಸಿ ಗಣೇಶ್‍ರವರು ಧನ್ಯವಾದಗೈದರು.

- Advertisement -

Related news

error: Content is protected !!