ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಪುರುಷರಕಟ್ಟೆಯಲ್ಲಿ ಸೆ.21 ರಂದು ರಾತ್ರಿ ನಡೆದಿದೆ.
ಪುರುಷರಕಟ್ಟೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಬೀಝಾ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಕ್ಟಿವಾಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಆಕ್ಟಿವಾ ಸವಾರ, ಹೋಳಿಗೆ ವ್ಯಾಪಾರಿ ಬಂಟ್ವಾಳ ತಾಲ್ಲೂಕಿನ ಪಂಜಲ ನಿವಾಸಿ ಗಣೇಶ್ ಅವರ ತಲೆ, ಕಾಲು ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇವರು ಹೋಳಿಗೆ ವ್ಯಾಪಾರ ಮಾಡುತ್ತಿದ್ದು, ಪ್ರತಿ ಅಂಗಡಿ, ಮನೆಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದರು. ಎಲ್ಲರಿಗೂ ಚಿರಪರಿಚಿತರಾಗಿದ್ದರು.
2005ರವರೆಗೆ ಸುಮಾರು 17 ವರ್ಷ ಪುರುಷರಕಟ್ಟೆ ಉದಯಭಾಗ್ಯ ಹೊಟೇಲಿನಲ್ಲಿ ತಿಂಡಿ ತಯಾರಕರಾಗಿದ್ದರು. ನಂತರ ನವೀನ್ ಪ್ರಭು ಮಾಲಕತ್ವದ ಸಂಸ್ಥೆಯ ಹೋಳಿಗೆಯನ್ನು ಮೊದಲಿಗೆ ಕಾಲ್ನಡಿಗೆಯಲ್ಲಿ, ನಂತರ ದ್ವಿಚಕ್ರ ವಾಹನದಲ್ಲಿ ಮಾರಾಟ ಮಾಡುತ್ತಿದ್ದರು.
ಮೃತರು ಪತ್ನಿ, 1 ಗಂಡು ಹಾಗೂ ಹೆಣ್ಣು ಮಗಳನ್ನು ಅಗಲಿದ್ದಾರೆ.