- Advertisement -
- Advertisement -


ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ, ಪ್ರಾಥಮಿಕ ಆರೋಗ್ಯ ಕೇಂದ್ರ ವಿಟ್ಲ ಹಾಗೂ ವಿಠಲ ಪದವಿ ಪೂರ್ವ ಕಾಲೇಜ್ ಇದರ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಮೆಗಾ ವೈದ್ಯಕೀಯ ಹಾಗೂ ಡೆಂಟಲ್ ಕ್ಯಾಂಪ್ ನ. 24ರಂದು ಆದಿತ್ಯವಾರ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ಉಚಿತ ಸಾಮಾನ್ಯ ವೈದ್ಯಕೀಯ ತಪಾಸಣೆ, ನೇತ್ರ ತಪಾಸಣೆ, ಮಕ್ಕಳ ತಜ್ಞರಿಂದ ತಪಾಸನೆ, ಇಸಿಜಿ, ಎಲುಬು ಹಾಗೂ ಮೂಳೆ ತಜ್ಞರಿಂದ ತಪಾಸಣೆ ರಕ್ತದೊತ್ತಡ ಹಾಗೂ ಮಧುಮೇಹ ತಪಾಸನೆ ನಡೆಯಲಿದೆ.
ದಂತ ಚಿಕಿತ್ಸೆ ವಿಭಾಗದಲ್ಲಿ ಉಚಿತ ದಂತ ತಪಾಸನೆ ಹಾಗೂ ಸಲಹೆ, ಹಲ್ಲುಗಳ ಶುಚಿಕರಣ, ಹಲ್ಲು ಕೀಳುವುದು, ದಂತ ಕುಳಿ ತುಂಬಿಸುವುದು. ಜೊತೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಇರುವ ಔಷದಗಳನ್ನು ಉಚಿತವಾಗಿ ನೀಡಲಾಗುವುದು ಮುಂತಾದ ಸೇವೆಗಳು ಲಭ್ಯವಿರುವುದು.
- Advertisement -