Sunday, May 19, 2024
spot_imgspot_img
spot_imgspot_img

ಭಾರತ ನೌಕಾಪಡೆಗೆ ಎರಡು ಎಂಎಚ್​-60 ಮಲ್ಟಿ ರೋಲ್​ ಹೆಲಿಕಾಪ್ಟರ್​​ಗಳನ್ನು ಹಸ್ತಾಂತರಿಸಿದ ಯುಎಸ್​ ನೌಕಾಪಡೆ

- Advertisement -G L Acharya panikkar
- Advertisement -

ಭಾರತ-ಯುಎಸ್​ ರಕ್ಷಣಾ ಸಂಬಂಧವನ್ನು ದೃಢಗೊಳಿಸುವ ಸಂಕೇತವಾಗಿ ಯುಎಸ್​ ನೌಕಾಪಡೆ, ಭಾರತದ ನೌಕಾಪಡೆಗೆ ಎರಡು ಎಂಎಚ್​ 60 ಮಲ್ಟಿ ರೋಲ್​ ಹೆಲಿಕಾಪ್ಟರ್ ಗಳನ್ನು ಹಸ್ತಾಂತರಿಸಿದೆ.

ವಿದೇಶಿ ಮಿಲಿಟರಿ ಸೇಲ್​ನಡಿ ಯುಎಸ್​ನ ಲಾಕ್​ಹೀಡ್​ ​ಮಾರ್ಟಿನ್​ ಕಂಪನಿಯಿಂದ ಈ ಎಂಎಚ್​ 60 ಮಲ್ಟಿ ರೋಲ್​ ಹೆಲಿಕಾಪ್ಟರ್​ಗಳು ತಯಾರಿತವಾಗಿದ್ದು, ಭಾರತ 2.4 ಬಿಲಿಯನ್​ ಡಾಲರ್​ವೆಚ್ಚದಲ್ಲಿ ಒಟ್ಟು 24 ಹೆಲಿಕಾಪ್ಟರ್​ಗಳನ್ನು ಯುಎಸ್​ನಿಂದ ಖರೀದಿ ಮಾಡಿದೆ. ಅದರ ಮೊದಲ ಹಂತದಲ್ಲಿ ಎರಡು ಹೆಲಿಕಾಪ್ಟರ್​ಗಳು ಭಾರತದ ನೌಕಾಪಡೆಯನ್ನು ಸೇರಿಕೊಂಡಿವೆ.

ಎಂಎಚ್​ 60 ಮಲ್ಟಿ ರೋಲ್​ ಹೆಲಿಕಾಪ್ಟರ್​ಗಳನ್ನು ಭಾರತಕ್ಕೆ ಔಪಚಾರಿಕವಾಗಿ ಹಸ್ತಾಂತರಿಸುವ ಸಮಾರಂಭ ಶುಕ್ರವಾರ ಅಮೆರಿಕದ ನೌಕಾನೆಲೆಯ ಉತ್ತರ ದ್ವೀಪ ಏರ್​ಸ್ಟೇಶನ್​ ನಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಯುಎಸ್​ನ ಭಾರತದ ರಾಯಭಾರಿ ತಾರಾಂಜಿತ್​ ಸಂಧು ಹಾಜರಿದ್ದರು.

ಎರಡು ಹೆಲಿಕಾಪ್ಟರ್​ಗಳ ವರ್ಗಾವಣೆ ಬಳಿಕ ಟ್ವೀಟ್​ ಮಾಡಿದ ಸಂಧು, ಭಾರತ ಮತ್ತು ಯುಎಸ್​ ಸ್ನೇಹ ಆಕಾಶವನ್ನು ಸ್ಪರ್ಶಿಸುತ್ತಿದೆ ಎಂದು ಹೇಳಿದ್ದಾರೆ. ಈ ಎರಡೂ ದೇಶಗಳು ಕೇವಲ ರಕ್ಷಣಾ ವ್ಯಾಪಾರವಷ್ಟೇ ಅಲ್ಲ, ರಕ್ಷಣಾ ಕ್ಷೇತ್ರದಲ್ಲಿ ಸಹ-ಉತ್ಪಾದನೆ, ಸಹ-ಅಭಿವೃದ್ಧಿಯಲ್ಲೂ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದೂ ತಿಳಿಸಿದ್ದಾರೆ.

ಎಂಎಚ್​-60 ಮಲ್ಟಿ ರೋಲ್​ ಹೆಲಿಕಾಪ್ಟರ್​ ವಿಶೇಷತೆಗಳುಈ ಎಂಎಚ್​-60 ಮಲ್ಟಿ ರೋಲ್​ ಹೆಲಿಕಾಪ್ಟರ್​ಗಳು ಮುಖ್ಯವಾಗಿ ಎಲ್ಲ ರೀತಿಯ ಹವಾಮಾನದಲ್ಲೂ ಕಾರ್ಯಾಚರಣೆ ನಡೆಸಬಹುದಾದ ಹೆಲಿಕಾಪ್ಟರ್​​ಗಳು. ಅತ್ಯಾಧುನಿಕ ಏಚಿಯಾನಿಕ್ಸ್​ಗಳನ್ನು ಒಳಗೊಂಡಿದ್ದು, ಹಲವು ರೀತಿಯ ವಿಶಿಷ್ಟು ಉಪಕರಣಗಳು, ಶಸ್ತ್ರಾಸ್ತ್ರಗಳನ್ನು ಸೇರಿಸಿ ನಿರ್ಮಾಣ ಮಾಡಲಾಗಿದೆ.

ಸದ್ಯ ಭಾರತದ ಮೊದಲ ಬ್ಯಾಚ್​ನ ಸಿಬ್ಬಂದಿ ಯುಎಸ್​ನಲ್ಲಿ ಹೆಲಿಕಾಪ್ಟರ್​ ಸಂಬಂಧಿತ ತರಬೇತಿ ಪಡೆಯುತ್ತಿದ್ದಾರೆ. ಹಿಂದಿನ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್​​​ ಅವರು 2020ರ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಒಂದು ವಾರ ಮೊದಲು ಈ ಹೆಲಿಕಾಪ್ಟರ್​ ಖರೀದಿ ವ್ಯವಹಾರ ಪೂರ್ಣಗೊಂಡಿತ್ತು.

- Advertisement -

Related news

error: Content is protected !!