Friday, May 3, 2024
spot_imgspot_img
spot_imgspot_img

ಸೆಕ್ಸಿಗೀತಾ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ; ಆರೋಪಿ ಅರೆಸ್ಟ್‌

- Advertisement -G L Acharya panikkar
- Advertisement -

ಫೇಸ್‌ಬುಕ್‌ನಲ್ಲಿ ಸೆಕ್ಸಿ ಗೀತಾ ಹೆಸರಿನಲ್ಲಿ ಖಾತೆ ತೆರೆದು ಇತ್ತೀಚೆಗೆ ಹಾರೋಹಳ್ಳಿಯ ಯುವಕನಿಗೆ ವಂಚಿಸಿದ್ದ ಯುವಕನನ್ನು ರಾಮನಗರ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ರವಿಕುಮಾರ್(24) ಬಂಧಿತ ವ್ಯಕ್ತಿ. ಮೂಲತಃ ಕುಣಿಗಲ್ ತಾಲೂಕಿನ ಕಗ್ಗರಿಯ ನಿವಾಸಿಯಾಗಿದ್ದ ಬೆಂಗಳೂರಿನ ದಾಸರಹಳ್ಳಿಯ ಪಿಜಿಯೊಂದರಲ್ಲಿ ನೆಲೆಸಿದ್ದ. ಖಾಸಗಿ ಡಾಟಾಬೇಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ, ಸಾಮಾಜಿಕ ಜಾಲತಾಣಗಳ ಬಳಕೆ, ಆನ್‌ಲೈನ್ ತಂತ್ರಜ್ಞಾನದ ಬಗ್ಗೆ ಚೆನ್ನಾಗಿ ತಿಳಿದಿದ್ದ.

ಘಟನೆ ವಿವರ

ಫೇಸ್‌ಬುಕ್‌ನಲ್ಲಿ ಸೆಕ್ಸಿ ಗೀತಾ ಎಂಬ ಖಾತೆ ತೆರೆದು ಹಾರೋಹಳ್ಳಿಯ ರಾಜೇಶ್‌ನ ಸ್ನೇಹ ಬೆಳೆಸಿದ್ದ ರವಿಕುಮಾರ್, ಸುಂದರ ಹುಡುಗಿಯರ ಫೋಟೋ ಕಳುಹಿಸಿ, ನಿನಗೆ ಬೇಕಾದವರನ್ನು ಆಯ್ಕೆ ಮಾಡಿಕೋ ಎಂದು ಹೇಳಿ ಗಾಢ ಸ್ನೇಹ ಬೆಳೆಸಿಕೊಂಡಿದ್ದ. ಇದೇ ರೀತಿ ಬೇರೆ ಹುಡುಗರಿಗೂ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಕ್ರಮೇಣ ಸೆಕ್ಸ್ ಚಾಟ್ ಮಾಡುತ್ತಿದ್ದ. ಬಳಿಕ ಮೊಬೈಲ್ ನಂಬರ್ ಪಡೆದು ಗಂಟೆಗಟ್ಟಲೆ ಹುಡುಗಿಯರ ದನಿಯಲ್ಲಿ ಮಾತನಾಡುತ್ತಿದ್ದ. ಬಳಿಕ ವಿವಿಧ ನೆಪ ಹೂಡಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಕೀಳುತ್ತಿದ್ದ.

ಈತನ ಫೋಟೋ ಬಳಕೆ ಮಾಡಿಕೊಂಡು ಅಶ್ಲೀಲವಾಗಿ ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದ. ಇದಕ್ಕೆ ಅಂಜಿದ ರಾಜೇಶ್ 41 ಲಕ್ಷ ರೂ. ಹಣ ನೀಡಿದ್ದ. ಇದರಿಂದ ರೋಸಿ ಹೋದ ರಾಜೇಶ್ ಸೈಬರ್‌ ಕ್ರೈಂ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸೆಕ್ಸಿಗೀತಾ ಫೇಸ್‌ಬುಕ್ ಖಾತೆ ಆಧಾರದ ಮೇಲೆ ರವಿಕುಮಾರ್‌ನನ್ನು ಬಂಧಿಸಿದ್ದಾರೆ. ನಂತರ ಸೆಕ್ಸಿಗೀತಾ ಅವಳಲ್ಲ, ಅವನು ಎಂಬುದು ಬೆಳಕಿಗೆ ಬಂದಿದೆ. ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿ ಮೋಜಿಗಾಗಿ ಆನ್‌ಲೈನ್ ವಂಚನೆ ಜಾಡು ಹಿಡಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹಾರೋಹಳ್ಳಿ ರಾಜೇಶ್ ಜತೆ ಸ್ನೇಹ ಬೆಳೆಸಿದ್ದ ಆರೋಪಿ, ಆತನೊಂದಿಗೆ ಹುಡುಗಿ ಧ್ವನಿಯಲ್ಲಿ ಗಂಟೆಗಟ್ಟಲೆ ಮಾತುಕತೆ ನಡೆಸುತ್ತಿದ್ದ. ಆತನಿಗೆ ಮದುವೆ ಆಗಿಲ್ಲ ಎಂಬ ವೀಕ್‌ನೆಸ್ ತಿಳಿದ ವಂಚಕ, ವಿವಾಹ ಆಗುವುದಾಗಿ ನಂಬಿಸಿ ಹಣ ಕಿತ್ತಿದ್ದಾನೆ. ಖುದ್ದು ಭೇಟಿ ಆಗಲು ರಾಜೇಶ್ ಕೇಳಿದಾಗ, ನಮ್ಮ ಕುಟುಂಬದಲ್ಲಿ ಸಮಸ್ಯೆ ಇದೆ ಎಂದು ಭೇಟಿ ಆಗುವುದನ್ನು ಉಪಾಯದಿಂದ ತಪ್ಪಿಸಿದ್ದ.

ರಾಜೇಶ್‌ರಿಂದ ಆರೋಪಿತ ವ್ಯಕ್ತಿ ಸಾಕಷ್ಟು ಹಣ ಪಡೆದಿದ್ದಾನೆ. ಪದೇ ಪದೆ ಹಣಕ್ಕೆ ಬೇಡಿಕೆ ಇಡುತ್ತಿದ್ದ ಕಾರಣ, ಒಂದು ಹಂತದಲ್ಲಿ ಹಣ ನೀಡುವುದು ಸಾಧ್ಯವಿಲ್ಲ ಎಂದು ರಾಜೇಶ್ ತಿಳಿಸಿದ್ದಾರೆ. ತಕ್ಷಣ ಆ್ಯಪ್ ಸಹಾಯದಿಂದ ರಾಜೇಶ್‌ನ ಫೋಟೋ ಪಡೆದು ಅಶ್ಲೀಲವಾಗಿ ಎಡಿಟ್ ಮಾಡಿ, ಹಣ ನೀಡದೆ ಹೋದರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಮರ್ಯಾದೆ ಕಳೆಯುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ಇದರಿಂದ ರಾಜೇಶ್ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಯಿತು. ದೂರುದಾರ ನೀಡಿದ್ದ ಮೊಬೈಲ್ ಸಂಖ್ಯೆ ಆಧಾರದ ಮೇಲೆ ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿಯ ಪಿಜಿಯಲ್ಲಿ ಪೊಲೀಸರು ಆರೋಪಿ ಬಂಧಿಸಿದ್ದಾರೆ.

ಆರೋಪಿಯಲ್ಲಿ ಹೆಣ್ಣಿನ ಭಾವನೆಗಳು ಹೆಚ್ಚು ಕಾಣುತ್ತಿದ್ದವು. ಈತನ ಚಟುವಟಿಕೆಗಳಿಂದ ಮುಜುಗರಗೊಂಡಿದ್ದ ಕುಟುಂಬದವರು ಈತನನ್ನು ಮನೆಯಿಂದ ಹೊರಗೆ ಕಳುಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನು ವಂಚನೆ ಮೂಲಕ ಸಂಪಾದಿಸಿದ ಹಣದಲ್ಲಿ ಯುವಕರೊಂದಿಗೆ ತಿರುಗಾಡಿ ಮೋಜು ಮಸ್ತಿ ಮಾಡುತ್ತಿದ್ದ, ತನ್ನ ಸ್ನೇಹಿತರು ತನ್ನ ಜೊತೆ ಬಿಟ್ಟು ಹೋಗದಿರಲಿ ಎಂಬ ಕಾರಣಕ್ಕೆ ಅವರನ್ನು ಸಂತೋಷಪಡಿಸಲು ಈ ರೀತಿ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!